ADVERTISEMENT

ನೂರು ಕೋಟಿ ಬಾಚಿದ ‘ಮಹಾವತಾರ್‌ ನರಸಿಂಹ’

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 23:39 IST
Last Updated 4 ಆಗಸ್ಟ್ 2025, 23:39 IST
ಚಿತ್ರ 
ಚಿತ್ರ    

ಜುಲೈ 25ರಂದು ಬಿಡುಗಡೆಗೊಂಡ ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿ ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿದ ‘ಮಹಾವತಾರ್‌ ನರಸಿಂಹ’ ಸಿನಿಮಾ ನೂರು ಕೋಟಿ ಕ್ಲಬ್‌ ಸೇರಿದೆ. 

ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಗೊಂಡ ಈ ಆ್ಯನಿಮೇಷನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ₹105 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಾಕಿದೆ. ಇದು ಭಾರತದಲ್ಲೇ ಅತಿ ಹೆಚ್ಚು ಹಣ ಗಳಿಸಿದ ಆ್ಯನಿಮೇಷನ್‌ ಚಿತ್ರ ಎಂದು ಹೊಂಬಾಳೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬುಕ್‌ ಮೈ ಶೋ ಮೂಲಕವೇ ಈ ಸಿನಿಮಾದ 20 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ.    

‘ಮಹಾವತಾರ್ ನರಸಿಂಹ’ ಸಿನಿಮಾವು ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಮುಂದಿನ ದಶಕದವರೆಗೆ ಸಾಗಲಿರುವ ಬೃಹತ್‌ ಆ್ಯನಿಮೇಟೆಡ್ ಸರಣಿಯ ಮೊದಲ ಅಧ್ಯಾಯವಾಗಿದೆ. ಅಶ್ವಿಕ್‌ ಕುಮಾರ್‌ ಈ ಅಧ್ಯಾಯದ ನಿರ್ದೇಶಕರಾಗಿದ್ದಾರೆ. ‘ಮಹಾವತಾರ್‌’ ಯೂನಿವರ್ಸ್‌ನ ಈ ಮೊದಲ ಅಧ್ಯಾಯವನ್ನು ಶಿಲ್ಪಾ ಧವನ್‌, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಈ ಸರಣಿಯಲ್ಲಿ ಮುಂದೆ ‘ಮಹಾವತಾರ್ ಪರಶುರಾಮ’(2027), ‘ಮಹಾವತಾರ್ ರಘುನಂದನ’(2029), ‘ಮಹಾವತಾರ್ ದ್ವಾರಕಾಧೀಶ್’(2031), ‘ಮಹಾವತಾರ್ ಗೋಕುಲನಂದ’(2033), ‘ಮಹಾವತಾರ್ ಕಲ್ಕಿ ಭಾಗ–1’(2035), ‘ಮಹಾವತಾರ್ ಕಲ್ಕಿ ಭಾಗ– 2’(2037) ಮೂಡಿಬರಲಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.