ADVERTISEMENT

‘ಮಹಿರ’ ಚಿತ್ರದ ಟೀಸರ್‌ ಬಿಡುಗಡೆ: ವಿಭಿನ್ನ ಪಾತ್ರದಲ್ಲಿ ರಾಜ್‌ ಬಿ. ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 15:59 IST
Last Updated 5 ನವೆಂಬರ್ 2018, 15:59 IST
   

ಬೆಂಗಳೂರು: ನಟ ರಾಜ್‌ ಬಿ. ಶೆಟ್ಟಿ ಅಭಿನಯದ ‘ಮಹಿರ’ ಚಿತ್ರದ ಟೀಸರ್‌ ಸೋಮವಾರ ಬಿಡುಗಡೆಯಾಗಿದೆ.

‘ಮಹಿರ’ ಚಿತ್ರವನ್ನುಮಹೇಶ್ ಗೌಡ ನಿರ್ದೇಶಿಸಿದ್ದಾರೆ.‘ಒಂದು ಮೊಟ್ಟೆಯ ಕಥೆ’ ಚಿತ್ರದ ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ಇಂಟಲಿಜೆನ್ಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಮಲಯಾಳಂ ಸೇರಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಮಂಗಳೂರು ಮೂಲದ ವರ್ಜಿನಿಯಾ ರಾಡ್ರಿಗ್ಸ್ ಮೊದಲ ಬಾರಿಗೆ ‘ಮಹಿರ’ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಚಿತ್ರದಲ್ಲಿ ಅವರದ್ದು ತಾಯಿಯ ಪಾತ್ರವಾದರೆ, ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅನುಭವ ಇರುವ ಚೈತ್ರಾ ಆಚಾರ್ ಮಗಳಾಗಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅದನ್ನು ತೋರಿಸುವ ಉದ್ದೇಶ ನಿರ್ದೇಶಕರದ್ದು.ಹಲವು ವಿಶೇಷತೆಗಳಿರುವ ಸಿನಿಮಾ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಬಿಡುಗಡೆಯಾದ ಟೀಸರ್‌ ಅನ್ನು ಈವರೆಗೆ 9 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.