ADVERTISEMENT

ಮಲಯಾಳಂನ ಖ್ಯಾತ ಹಾಸ್ಯ ನಟ ಪೂಜಾಪ್ಪುರ ರವಿ ನಿಧನ

ಇಡುಕ್ಕಿ ಜಿಲ್ಲೆಯ ಮರಾಯೂರಿನ ಅವರ ಮನೆಯಲ್ಲಿ ವಯೋಸಹಜ ಖಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2023, 10:32 IST
Last Updated 18 ಜೂನ್ 2023, 10:32 IST
ಪೂಜಾಪ್ಪುರ ರವಿ
ಪೂಜಾಪ್ಪುರ ರವಿ   ಚಿತ್ರ ಕೃಪೆ– ಟ್ವಿಟರ್– Vysakh.reghunadhan

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಹಿರಿಯ ನಟ ಪೂಜಾಪ್ಪುರ ರವಿ (ರವೀಂದ್ರನ್ ನಾಯರ್) ಭಾನುವಾರ ನಿಧನರಾಗಿದ್ದಾರೆ.

ಅವರಿಗೆ 86 ವರ್ಷ ವಯಸ್ಸಾಗಿತ್ತು. ಇಡುಕ್ಕಿ ಜಿಲ್ಲೆಯ ಮರಾಯೂರಿನ ಅವರ ಮನೆಯಲ್ಲಿ ವಯೋಸಹಜ ಖಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ.

ಎನ್.ಕೆ. ಆಚಾರಿ ಅವರ ‘ಕಲಾನಿಲಯಂ’ ಎಂಬ ರಂಗಭೂಮಿ ತಂಡದಿಂದ ಬೆಳೆದ ಪೂಜಾಪ್ಪುರ ರವಿ, 1976 ರಲ್ಲಿ ‘ಅಮ್ಮಿಣಿ ಅಮ್ಮಾವನ್’ ಎಂಬ ಸಿನಿಮಾ ಮೂಲಕ ಮೋಳಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ADVERTISEMENT

ಅವರು ಇದುವರೆಗೆ 800 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚಿನ ‘ಗುಪ್ಪಿ’ ಸಿನಿಮಾ ರವಿ ಅವರು ಅಭಿನಯಿಸಿದ ಕೊನೆಯ ಚಿತ್ರವಾಗಿತ್ತು. ಅವರು ಮಲಯಾಳಂ ಚಿತ್ರರಂಗದ ಬಹುತೇಕ ಎಲ್ಲ ನಟರ ಜೊತೆ ನಟಿಸಿದ್ದು ಅವರ ನಿಧನಕ್ಕೆ ಅನೇಕ ನಟ–ನಟಿಯರು ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.