ADVERTISEMENT

ಗಂಗಾ ನದಿಯಲ್ಲಿ ಮನೋಜ್ ಕುಮಾರ್ ಚಿತಾಭಸ್ಮ ವಿಸರ್ಜನೆ

ಪಿಟಿಐ
Published 12 ಏಪ್ರಿಲ್ 2025, 11:31 IST
Last Updated 12 ಏಪ್ರಿಲ್ 2025, 11:31 IST
<div class="paragraphs"><p>ಗಂಗಾನದಿಯಲ್ಲಿ ಮನೋಜ್ ಕುಮಾರ್ ಚಿತಾಭಸ್ಮ ವಿಸರ್ಜಿಸಿದ&nbsp;ಪುತ್ರರಾದ ಕುನಾಲ್ ಮತ್ತು ವಿಶಾಲ್.</p></div>

ಗಂಗಾನದಿಯಲ್ಲಿ ಮನೋಜ್ ಕುಮಾರ್ ಚಿತಾಭಸ್ಮ ವಿಸರ್ಜಿಸಿದ ಪುತ್ರರಾದ ಕುನಾಲ್ ಮತ್ತು ವಿಶಾಲ್.

   

(ಪಿಟಿಐ ಚಿತ್ರ)

ಹರಿದ್ವಾರ: ಬಾಲಿವುಡ್‌ನ ಹೆಸರಾಂತ ನಟ, ನಿರ್ದೇಶಕ ಮನೋಜ್‌ ಕುಮಾರ್ ಅವರ ಚಿತಾಭಸ್ಮವನ್ನು ಕುಟುಂಬಸ್ಥರು ಹರಿದ್ವಾರದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಶನಿವಾರ ವಿಸರ್ಜಿಸಿದರು.

ADVERTISEMENT

ಪುತ್ರರಾದ ಕುನಾಲ್ ಮತ್ತು ವಿಶಾಲ್ ಸೇರಿದಂತೆ ಅವರ ಕುಟುಂಬ ಸದಸ್ಯರು ಇಲ್ಲಿನ ಬ್ರಹ್ಮ ಕುಂಡ್ ಘಾಟ್‌ನಲ್ಲಿ ಪುರೋಹಿತರೊಂದಿಗೆ ವಿಧಿವಿಧಾನಗಳನ್ನು ನೆರವೇರಿಸಿದರು.

'ನಾವು ತಂದೆಯವರ ಚಿತಾಭಸ್ಮವನ್ನು ಇಲ್ಲಿ ವಿಸರ್ಜಿಸಿದ್ದೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ' ಎಂದು ಕುನಾಲ್ ಸುದ್ದಿಗಾರರಿಗೆ ತಿಳಿಸಿದರು.

ದೇಶಭಕ್ತಿಯ ಸರಣಿ ಚಿತ್ರಗಳಲ್ಲಿ ಅಭಿನಯಿಸಿದ್ದ ಮನೋಜ್ ಕುಮಾರ್‌, ‘ಮಿಸ್ಟರ್ ಭಾರತ್’ ಎಂದೇ ಜನಜನಿತರಾಗಿದ್ದರು. ‘ಪೂರಬ್ ಔರ್‌ ಪಶ್ಚಿಮ್’, ‘ಶಹೀದ್‌’, ‘ರೋಟಿ ಕಪಡಾ ಔರ್ ಮಕಾನ್’ ಅವರ ಅಭಿನಯದ ಪ್ರಮುಖ ಚಿತ್ರಗಳು.

ಕೆಲ ತಿಂಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಏಪ್ರಿಲ್‌ 4ರಂದು ಕೋಕಿಲಾಬೆನ್‌ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.