ADVERTISEMENT

ಸಿನಿ ಸುದ್ದಿ: ‘ಮಾರ್ಕ್‌’ನಲ್ಲಿ ಸುದೀಪ್‌ ಮಿಂಚು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 23:28 IST
Last Updated 9 ನವೆಂಬರ್ 2025, 23:28 IST
<div class="paragraphs"><p>ಸುದೀಪ್‌ </p></div>

ಸುದೀಪ್‌

   

ನಟ ಸುದೀಪ್‌ ನಟನೆಯ 47ನೇ ಸಿನಿಮಾ ‘ಮಾರ್ಕ್‌’ ಡಿ.25ರಂದು ತೆರೆಕಾಣಲಿದೆ. ‘ಮ್ಯಾಕ್ಸ್‌’ ಚಿತ್ರದ ನಿರ್ದೇಶಕ ವಿಜಯ್‌ ಕಾರ್ತಿಕೇಯ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ‘ಮಾರ್ಕ್‌’ ಆಗಿ ಮಿಂಚಿದ್ದಾರೆ ಸುದೀಪ್‌. 

ಚಿತ್ರದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್. ‘ಮಾರ್ಕ್ ಬಗ್ಗೆ ಮಾತನಾಡುವಾಗ ಮನಸ್ಸಿನೊಳಗೆ ಮಾತಾಡ್ಬೇಕು’ ಎಂಬ ಡೈಲಾಗ್‌ ಮೂಲಕ ಸುದೀಪ್‌ ಅವರ ಪಾತ್ರವನ್ನು ಪರಿಚಯಿಸಿದೆ ಚಿತ್ರತಂಡ. 

ADVERTISEMENT

ಟೀಸರ್‌ ತುಂಬಾ ಆ್ಯಕ್ಷನ್‌ ದೃಶ್ಯಗಳೇ ತುಂಬಿಕೊಂಡಿದ್ದು, ಇದು ಇಡೀ ಸಿನಿಮಾದ ಹೇಗಿರಲಿದೆ ಎನ್ನುವುದರ ಸುಳಿವು ನೀಡಿದೆ. ಭರ್ಜರಿ ಆ್ಯಕ್ಷನ್ಸ್ ಮೂಲಕ ಕಿಚ್ಚ ಖದರ್ ತೋರಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಇಮ್ಮಡಿಯಾಗಿದೆ. ಈಗಾಗಲೇ ಸೈಕೋ ಸೈತಾನ್‌ ಹಾಡಿನ ಮೂಲಕ ಸುದೀಪ್ ಅವರ ಪಾತ್ರವನ್ನು ಚಿತ್ರತಂಡ ವಿವರಿಸಿತ್ತು. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ‘ಮ್ಯಾಕ್ಸ್‌’ನಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೇಳಿದ್ದ ವಿಜಯ್‌,  ಮತ್ತೊಮ್ಮೆ ಅದೇ ಮಾದರಿಯ ಕಥೆಯನ್ನು ತೆರೆಗೆ ತರಲಿದ್ದಾರೆ. ಈ ಸಿನಿಮಾವೂ ರೋಚಕತೆಯಿಂದ ಕೂಡಿರಲಿದೆ ಎನ್ನುವದಕ್ಕೆ ಸಾಕ್ಷ್ಯದಂತಿದೆ ಟೀಸರ್‌. ‘ಇದು ‘ಮ್ಯಾಕ್ಸ್‌–2 ಅಲ್ಲ’ ಎನ್ನುವ ಸ್ಪಷ್ಟನೆಯನ್ನು ಈಗಾಗಲೇ ಸುದೀಪ್‌ ನೀಡಿದ್ದು, ‘ಪಾತ್ರದಲ್ಲಿ ಆನಿಮಲ್‌ ಇನ್‌ಸ್ಟಿನ್ಕ್ಟ್‌ ಇದೆ’ ಎಂದಿದ್ದರು. 

ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜೊತೆಯಾಗಿ ಸಿನಿಮಾವನ್ನು ನಿರ್ಮಿಸುತ್ತಿವೆ. ಶೇಖರ್‌ಚಂದ್ರ ಛಾಯಾಚಿತ್ರಗ್ರಹಣ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ. ಸ್ಟಂಟ್ ಸಿಲ್ವಾ, ಸುಪ್ರೀಂ ಸುಂದರ್, ವಿಕ್ರಮ್ ಮೋರ್, ಕೆವಿನ್ ಕುಮಾರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡ ಬೆನ್ನಲ್ಲೇ ಸುದೀಪ್‌ ಮತ್ತೆ ‘ಬಿಲ್ಲ ರಂಗ ಬಾಷಾ’ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.