ADVERTISEMENT

‘ಕಿಂಗ್ ಆಫ್ ಪಾಪ್' ಮೈಕಲ್ ಜಾಕ್ಸನ್ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2026, 7:42 IST
Last Updated 5 ಫೆಬ್ರುವರಿ 2026, 7:42 IST
   

ಲಾಸ್‌ ಏಂಜಲೀಸ್: ಖ್ಯಾತ ಪಾಪ್ ಕಲಾವಿದ ದಿವಂಗತ ಮೈಕಲ್ ಜಾಕ್ಸನ್ ಅವರ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 

ತಮ್ಮ ವಿಭಿನ್ನ ನೃತ್ಯಶೈಲಿಯ ಮೂಲಕ ಜಗತ್ತಿನಾದ್ಯಂತ ಹೆಸರುಗಳಿಸಿರುವ ಮೈಕಲ್ ಜಾಕ್ಸನ್ ಅವರು 2009ರ ಜೂನ್ 25ರಂದು ನಿಧನರಾದರು.

17 ವರ್ಷಗಳ ಬಳಿಕ ಜಾಕ್ಸನ್ ಜೀವನಾಧಾರಿತ ಕಥೆ ತೆರೆ ಮೇಲೆ ಬರಲು ಸಜ್ಜಾಗಿದೆ.

ADVERTISEMENT

ಟ್ರೇಲರ್‌ನಲ್ಲಿ, ಮೈಕಲ್ ಜಾಕ್ಸನ್ ಅವರ ನೃತ್ಯ, ಮೂನ್‌ವಾಕ್, ಅವರು ಗಳಿಸಿದ್ದ ಜನಪ್ರಿಯತೆ, ಮರಣದ ವೇಳೆ ಸೇರಿದ್ದ ಜನಸಾಗರವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಅವರಿಗಿದ್ದ ‘ಕಿಂಗ್ ಆಫ್ ಪಾಪ್’ ಬಿರುದು ಪ್ರೇಕ್ಷಕರ ಗಮನ ಸೆಳೆದಿದೆ.

ಈ ಚಿತ್ರವು ಜಗತ್ತಿನಾದ್ಯಂತ ಏ. 24ರಂದು ತೆರೆಕಾಣಲಿದೆ. ಜಾಕ್ಸನ್ ಪಾತ್ರದಲ್ಲಿ ಅಮೆರಿಕನ್ ಗಾಯಕ, ನಟ ಜಾಫರ್ ಜಾಕ್ಸನ್ ಹಾಗೂ ತಂದೆಯ ಪಾತ್ರದಲ್ಲಿ ಕೋಲ್ಮನ್ ಡೊಮಿಂಗೋ ಅವರು ಬಣ್ಣ ಹಚ್ಚಿದ್ದಾರೆ.

ಈ ಚಿತ್ರವನ್ನು ಗ್ರಹಾಮ್ ಕಿಂಗ್ ಜಾನ್‌ ಬ್ರಾಂಚ್,  ಜಾನ್ ಮೆಕ್‌ಕ್ಲೈನ್ ನಿರ್ಮಾಣ ಮಾಡಿದ್ದು,  ಆ್ಯಂಟೋನಿ  ಫುಕ್ವಾ ಅವರು ನಿರ್ದೇಶನ ಮಾಡಿದ್ದಾರೆ. ಜಾನ್ ಲೊಗಾನ್ ಅವರು ಚಿತ್ರಕಥೆ ಬರೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.