ತೆಲುಗಿನ ‘ಹನುಮಾನ್’ ಸಿನಿಮಾ ಖ್ಯಾತಿಯ ನಟ ತೇಜ್ ಸಜ್ಜಾ ಅಭಿನಯದ ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಮಿರಾಯ್’ನ ಟ್ರೇಲರ್ ಬಿಡುಗಡೆಯಾಗಿದೆ. ಸೂಪರ್‌ಯೋಧನ ಪಾತ್ರದಲ್ಲಿ ತೇಜ್ ಕಾಣಿಸಿಕೊಂಡಿದ್ದು, ಸಿನಿಮಾ ಸೆ.12ರಂದು ತೆರೆಕಾಣುತ್ತಿದೆ.
ಟ್ರೇಲರ್ ಭರ್ಜರಿಯಾಗಿ ಮೂಡಿಬಂದಿದ್ದು, ವಿಎಫ್‌ಎಕ್ಸ್ ಅಚ್ಚುಕಟ್ಟಾಗಿ ಮೈನವಿರೇಳಿಸುವಂತಿದೆ. ಈ ಸಿನಿಮಾ ಪ್ರೇಕ್ಷಕರಿಗೆ ವಿಷ್ಯುವಲ್ ಟ್ರೀಟ್ ಆಗುವ ಲಕ್ಷಣಗಳನ್ನು ಹೊಂದಿದೆ. ನಟ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಭರ್ಜರಿ ಆ್ಯಕ್ಷನ್ ಜೊತೆಗೆ ಪುರಾಣದ ಕಥೆಯನ್ನು ಇದು ಕಟ್ಟಿಕೊಟ್ಟಿದೆ. ತ್ರೇತಾಯುಗದಲ್ಲಿ ಶ್ರೀರಾಮನ ಅವಧಿಯಲ್ಲಿ ತಯಾರಿಸಿದಂಥ ಒಂದು ಆಯುಧದ ಹಿನ್ನೆಲೆಯಲ್ಲಿ ಇಡೀ ಸಿನಿಮಾದ ಕಥೆಯಿದೆ. ಚಿತ್ರದಲ್ಲಿ ತೇಜ್ ಸಜ್ಜಾಗೆ ರಿತಿಕಾ ನಾಯಕ್ ಜೋಡಿಯಾಗಿದ್ದಾರೆ. ‘ಕಾರ್ತಿಕೇಯ’, ‘ಕಾರ್ತಿಕೇಯ-2’, ‘ಧಮಾಕ’ ಸೇರಿದಂತೆ ಹಲವು ಹಿಟ್ ಚಿತ್ರಗಳ ಸಾರಥಿ ಕಾರ್ತಿಕ್ ಗಟ್ಟಮ್ನೇನಿ ಸಜ್ಜಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಹನುಮಾನ್’ನಲ್ಲಿ ಸೂಪರ್ ಹೀರೊ ಆಗಿದ್ದ ತೇಜ್ ಈಗ ‘ಮಿರಾಯ್’ನಲ್ಲಿ ಸೂಪರ್ ಯೋಧನಾಗಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‘ಮಿರಾಯ್’ ಸಿನಿಮಾ 2ಡಿ ಹಾಗೂ 3ಡಿಯಲ್ಲಿ ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಈ ಚಿತ್ರವನ್ನು ವಿಕೆ ಫಿಲ್ಮ್ ಬ್ಯಾನರ್‌ನಡಿ ಹೊಂಬಾಳೆ ಫಿಲ್ಮ್ಸ್‌ರಿಲೀಸ್ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.