ADVERTISEMENT

ಕುತೂಹಲ ಮೂಡಿಸಿದ ‘ಮಿರ್ಜಾಪುರ್’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 19:30 IST
Last Updated 25 ಅಕ್ಟೋಬರ್ 2018, 19:30 IST
ಮಿರ್ಜಾಪುರ್ ವೆಬ್ ಸಿರೀಸ್‌ನ ದೃಶ್ಯ
ಮಿರ್ಜಾಪುರ್ ವೆಬ್ ಸಿರೀಸ್‌ನ ದೃಶ್ಯ   

ಶಕ್ತಿ ಪ್ರದರ್ಶನವೇ ಸರಿ ಎನ್ನುವ ನಾಡಿನ ಉದ್ದೀಪನ ಔಷಧಗಳು, ಗನ್‍ಗಳು ಹಾಗೂರಾಜಕೀಯದ ಶಕ್ತಿಯ ಸುತ್ತ ಹೆಣೆದ ಕಥೆಯ ವೆಬ್‌ ಸಿರೀಸ್, ‘ಮಿರ್ಜಾಪುರ್’. ಅದರ ಮೊದಲ ಟ್ರೇಲರ್ ಅನ್ನು ಅಮೆಜಾನ್ ಪ್ರೈಮ್ ವಿಡಿಯೊ, ಎಕ್ಸೆಲ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್‌ ಈಚೆಗೆ ಬಿಡುಗಡೆ ಮಾಡಿದೆ.

ಅಮೆಜಾನ್ ಪ್ರೈಮ್ ವಿಡಿಯೊ ಹಾಗೂ ಯೂಟ್ಯೂಬ್‌ನಲ್ಲಿ ಟ್ರೇಲರ್ ಲಭ್ಯವಿದ್ದು, ಈಗಾಗಲೇ 1.54 ಲಕ್ಷ ಮಂದಿ ವೀಕ್ಷಿಸಿದ್ದಾರೆ. ನವೆಂಬರ್ 16ರಂದು ಈ ವೆಬ್‌ ಸಿರೀಸ್‌ ಅಮೆಜಾನ್ ಪ್ರೈಮ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.

ಕಣ್ಣುಮಿಟುಕಿಸದೆ ಉಸಿರುಬಿಗಿಹಿಡಿದು ನೋಡುವಂತಹ ಕಥಾನಕವನ್ನು ಹೊಂದಿರುವ ‘ಮಿರ್ಜಾಪುರ್‌’ನಲ್ಲಿ ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಅವರೊಂದಿಗೆಅಲಿ ಫಜಲ್, ವಿಕ್ರಾಂತ್ ಮ್ಯಾಸ್ಸೆ, ದಿವ್ಯೇಂದು ಶರ್ಮಾ, ಕುಲಭೂಷಣ್ ಖರ್ಬಾಂಡಾ, ಶ್ವೇತಾ ತ್ರಿಪಾಠಿ, ಶ್ರಿಯಾ ಪಿಳ್ಗಾಂವ್‍ಕರ್, ರಸಿಕಾ ದುಗಲ್, ಹರ್ಷಿತಾ ಗೌರ್, ಮತ್ತು ಅಮಿತ್ ಸಿಯಾಲ್ ಸಹ ನಟಿಸಿದ್ದಾರೆ.

ADVERTISEMENT

ಅಧಿಕಾರಕ್ಕಾಗಿ ಭ್ರಮಾಧೀನರಾಗುವ ಸಹೋದರರಿಬ್ಬರ ಕಥೆಯಾದ ‘ವಿರ್ಜಾಪುರ್‌’ನಲ್ಲಿ, ಭಾರತದ ಹೃದಯಭಾಗದಹಾಗೂ ಯುವಕರ ಚಿತ್ರಣವನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಉದ್ದೀಪನ ಔಷಧಗಳು, ಗನ್‍ಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ಕೂಡಿದ ಸಮಾಜದಲ್ಲಿ ಜಾತಿ, ಅಧಿಕಾರ, ಪ್ರತಿಷ್ಠೆ ಮತ್ತು ಸಿಡುಕುತನ ಒಂದಾಗಿ ಹಿಂಸಾಚಾರ ಹೇಗೆ ಜೀವನದ ಮಾರ್ಗವಾಗುತ್ತದೆ ಎಂಬುದನ್ನು ಚಿತ್ರೀಕರಿಸಲಾಗಿದೆ.

ಡwಅಖಂಡಾನಂದ ತ್ರಿಪಾಠಿ ಕೋಟ್ಯಧಿಪತಿ ಕಾರ್ಪೆಟ್ ರಫ್ತುದಾರನಾಗಿದ್ದು, ಮಿರ್ಜಾಪುರ್‌ನ ಮಾಫಿಯಾ ಡಾನ್ ಎನಿಸಿಕೊಂಡಿರುತ್ತಾನೆ.

ಅಪ್ರಯೋಜಕ ಅಧಿಕಾರದಾಹವಿರುವ ವಾರಸುದಾರನಾದ ಅವನ ಮಗ ಮುನ್ನಾ, ತನ್ನ ತಂದೆಯ ಪರಂಪರೆಯನ್ನು ಸ್ವಾಧೀನಪಡಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ. ಈ ಕುರಿತು ರೋಚಕವಾಗಿ, ವೆಬ್ ಸಿರೀಸ್ ಅನ್ನು ನಿರ್ದೇಶಿಸಿದ್ದಾರೆ ಗುರ್ಮೀತ್ ಸಿಂಗ್.

ಎಕ್ಸೆಲ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್‌ನರಿತೇಶ್ ಸಿಧ್ವಾನಿ, ‘ಮಿರ್ಜಾಪುರ್‌ ಅನ್ನು ಅಮೆಜಾನ್ ಪ್ರೈಮ್ ವಿಡಿಯೊ ಮೂಲಕ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಈ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದಕ್ಕೆ ಕಾತುರನಾಗಿದ್ದೇವೆ’ ಎಂದಿದ್ದಾರೆ.

ಕರಣ್ ಅನ್ಶುಮಾನ್ ಮತ್ತು ಪುನೀತ್ ಕೃಷ್ಣ ಅವರ ರಚನೆ ಮತ್ತು ಗುರ್ಮೀತ್ ಸಿಂಗ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಿರ್ಜಾಪುರ್, ಒಟ್ಟು 9 ಎಪಿಸೋಡ್‌ಗಳನ್ನು ಹೊಂದಿದೆ.

ಮಿರ್ಜಾಪುರ್ ಭಾರತದಿಂದ ಬರುತ್ತಿರುವ ಐದನೇ ಪ್ರೈಮ್ ಒರಿಜಿನಲ್ ವಿಡಿಯೊ ಸಿರೀಸ್ ಎಂದು ಅಮೆಜಾನ್ ಪ್ರೈಮ್ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.