ಒಟಿಟಿ ಪ್ರಸಾರ ವೇದಿಕೆ ಡಿಸ್ಕವರಿ ಪ್ಲಸ್‌ನಲ್ಲಿ ‘ಮಿಷನ್ ಫ್ರಂಟ್‌ಲೈನ್ ವಿದ್ ಸಾರಾ ಅಲಿ ಖಾನ್’, ‘ಸ್ಟಾರ್ ವರ್ಸಸ್ ಫುಡ್’ ಮತ್ತು ‘ಸೇ ಎಸ್ ಟು ದಿ ಡ್ರೆಸ್’ (ವಿವಿಧ ಸ್ವರೂಪದ ಉಡುಗೆಗಳನ್ನು ಭಾರತೀಯ ಸಮಾಜ ಸ್ವೀಕರಿಸಿದ ಪರಿ) ಹೆಸರಿನ ಹೊಸ ವಿಷಯಾಧಾರಿತ ಸರಣಿಗಳನ್ನು ಪ್ರಸಾರ ಮಾಡಲಿದೆ.
ಬುಧವಾರ ಹೊಸ ಸರಣಿಗಳ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸೆಲೆಬ್ರಿಟಿಗಳು ನಡೆಸಿಕೊಡುವ ‘ಸ್ಟಾರ್ ವರ್ಸಸ್ ಫುಡ್’ನ ಎರಡನೇ ಆವೃತ್ತಿ ಈ ಬಾರಿ ಪ್ರಸಾರಗೊಳ್ಳಲಿದೆ. ಬಾಲಿವುಡ್ ನಟರಾದ ಅನಿಲ್ ಕಪೂರ್, ಅನನ್ಯಾ ಪಾಂಡೆ, ನೋರಾ ಫತೇಗಿ, ರ‍್ಯಾಪರ್ ಬಾದ್‌ಶಾ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಕೊರಿಯಾದ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ, ಸೆಲೆಬ್ರಿಟಿಗಳು ತಮ್ಮ ಪ್ರೀತಿಪಾತ್ರರಿಗೆ ಊಟವನ್ನು ತಯಾರಿಸುವ ಛಾಲೆಂಜ್ ನಡೆಸಿಕೊಡಲಿದ್ದಾರೆ. ಎಂಡೆಮೋಲ್ ಇಂಡಿಯಾ ಸಂಸ್ಥೆ ಈ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದೆ.
‘ಮಿಷನ್ ಫ್ರಂಟ್‌ಲೈನ್ ವಿತ್ ಸಾರಾ ಅಲಿ ಖಾನ್’ ನಲ್ಲಿ, ‘ಲವ್ ಆಜ್ ಕಲ್’ ಚಿತ್ರದ ನಾಯಕಿ ಸಾರಾ ಅಲಿ ಖಾನ್ ಅಸ್ಸಾಂನ ವೀರರ ಪಡೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
‘ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ನಿಭಾಯಿಸಲು ಸ್ಥಾಪಿತವಾದ ಭಾರತದ ಮೊದಲ ಮಹಿಳಾ ಕಮಾಂಡೋ ಘಟಕವಾದ ವೀರಾಂಗನಾ ಪಡೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಚೆನ್ನಾಗಿ ವರ್ಕ್‌ಔಟ್ ಮಾಡಿದ ಲುಕ್ ಈ ಸರಣಿಯಲ್ಲಿ ಇರಲಿದೆ’ ಎಂದು ಡಿಸ್ನಿ ಪ್ಲಸ್ ಹೇಳಿದೆ.
ಡಿಸ್ಕವರಿ ಪ್ಲಸ್ ತನ್ನ ಮೂಲ ಸರಣಿ ‘ಮನಿ ಮಾಫಿಯಾ’ವನ್ನೂ ಆರಂಭಿಸಿದೆ.ಚಂದ್ರ ಟಾಕೀಸ್ ನಿರ್ಮಿಸಿದ ಈ ಸರಣಿಯು ಭಾರತದ ದೊಡ್ಡ ಹಗರಣಗಳನ್ನು ಕಥಾ ರೂಪದಲ್ಲಿ ದಾಖಲಿಸಿದೆ. ಬುಧವಾರ (ಆಗಸ್ಟ್ 8) ಪ್ರಸಾರ ಆರಂಭವಾಗಿದೆ.
ಡಿಸ್ಕವರಿ ಇಂಕ್‌ನ ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕಿ ಮೇಘಾ ಟಾಟಾ ಮಾಹಿತಿ ನೀಡಿ,‘ಆನ್‌ಲೈನ್ ಪ್ರಸಾರ ಸೇವೆಯಲ್ಲಿ ಸಾಕಷ್ಟು ವಿಷಯಗಳಿಗೆ ಮೂಲದಲ್ಲೇ ಜೀವ ತುಂಬಿ, ತುಂಬಾ ಬೋಲ್ಡ್ ಮತ್ತು ಅನಿರೀಕ್ಷಿತ ಸಂಗತಿ ಒಳಗೊಂಡ ಕಥಾ ರೂಪಕಗಳನ್ನು ಪ್ರೇಕ್ಷಕರಿಗೆ ಒದಗಿಸುವ ಗುರಿ ಹೊಂದಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.