ADVERTISEMENT

'ವೃಷಭ' ಚಿತ್ರದ ಟೀಸರ್‌ ಬಿಡುಗಡೆ: ರಾಜನಾಗಿ ಬಂದ‌‌ ಮೋಹನ್ ಲಾಲ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 23:30 IST
Last Updated 21 ಸೆಪ್ಟೆಂಬರ್ 2025, 23:30 IST
ಮೋಹನ್‌ ಲಾಲ್‌
ಮೋಹನ್‌ ಲಾಲ್‌   

ಮಲಯಾಳ ನಟ ಮೋಹನ್ ಲಾಲ್ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪಡೆದ ಖುಷಿಯಲ್ಲಿದ್ದಾರೆ. ಜತೆಗೆ ಅವರ ನಟನೆಯ ‘ವೃಷಭ’ ಚಿತ್ರದ ಟೀಸರ್‌ ಕೂಡ ಬಿಡುಗಡೆಗೊಂಡಿದೆ. ಕನ್ನಡಿಗ ನಂದ ಕಿಶೋರ್ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಚಿತ್ರವಿದು. ಮಲಯಾಳ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿದ್ದು ಕನ್ನಡ ಮತ್ತು ಹಿಂದಿಗೆ ಡಬ್‌ ಆಗಲಿದೆ.  

‘ಇದು ಕೇವಲ ಸಿನಿಮಾವಲ್ಲ, ಭಾವನಾತ್ಮಕ ಪಯಣ. ಲೆಜೆಂಡ್ ಎನಿಸಿಕೊಂಡಿರುವ ಮೋಹನ್ ಲಾಲ್ ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ಇದೆ. ಅವರ ಮಗನ ಪಾತ್ರದಲ್ಲಿ ಸಮರ್ಜಿತ್ ಲಂಕೇಶ್‌ ನಟಿಸಿದ್ದಾರೆ. ವೃಷಭವು ತಂದೆ ಮತ್ತು ಮಗನ ಬಾಂಧವ್ಯದ ಕಥೆ. ಈ ವರ್ಷ ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ’ ಎಂದಿದ್ದಾರೆ ನಂದ ಕಿಶೋರ್. 

ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲ್ಮ್ಸ್‌, ಅಭಿಷೇಕ್ ಎಸ್ ವ್ಯಾಸ ಸ್ಟುಡಿಯೋಸ್‌ ಜಂಟಿಯಾಗಿ ನಿರ್ಮಾಣ ಮಾಡಿವೆ. ಸ್ಯಾಮ್ ಸಿ.ಎಸ್ ಸಂಗೀತ, ಆಂಥೋನಿ ಸ್ಯಾಮ್ಸನ್ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.