ADVERTISEMENT

‘ಲೂಸಿಫರ್’ ಯಶಸ್ಸು: ಲಾಲ್ ಧನ್ಯವಾದ

​ಪ್ರಜಾವಾಣಿ ವಾರ್ತೆ
Published 21 ಮೇ 2019, 9:42 IST
Last Updated 21 ಮೇ 2019, 9:42 IST
’ಲೂಸಿಫರ್’ ಸಿನಿಮಾದಲ್ಲಿ ಮೋಹನ್ ಲಾಲ್ 
’ಲೂಸಿಫರ್’ ಸಿನಿಮಾದಲ್ಲಿ ಮೋಹನ್ ಲಾಲ್    

ಮಲಯಾಳಂ ಚಿತ್ರರಂಗದ ಇತ್ತೀಚಿನ ದೊಡ್ಡ ಹಿಟ್ ಚಿತ್ರವಾಗಿರುವ ‘ಲೂಸಿಫರ್’ಗೆ ಪ್ರೇಕ್ಷಕರು ಸ್ಪಂದಿಸಿದ ರೀತಿ ಕಂಡು ನಟ ಮೋಹನ್ ಲಾಲ್ ಮೂಕವಿಸ್ಮಿತರಾಗಿದ್ದಾರೆ.

ಬಾಕ್ಸಾಫೀಸಿನಲ್ಲಿ ₹ 200 ಕೋಟಿಗೂ ಹೆಚ್ಚು ಹಣವನ್ನು ಸಂಪಾದಿಸಿದ ‘ಲೂಸಿಫರ್’ ಯಶಸ್ಸಿಗಾಗಿ ಮೋಹನ್ ಲಾಲ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಚಿತ್ರದಲ್ಲಿ ಸ್ಟೀಫನ್ ಹೆಸರಿನ ನಾಯಕನ ಪಾತ್ರದಲ್ಲಿ ಲಾಲ್ ನಟಿಸಿದ್ದರು. ಚಿತ್ರದ ಯಶಸ್ಸಿಗಾಗಿ ಲಾಲ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಧನ್ಯವಾದ ಸಲ್ಲಿಸಿದ್ದು, ಇದೊಂದು ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

ಪೃಥ್ವಿರಾಜ್ ಸುಕುಮಾರ್ ‘ಲೂಸಿಫರ್’ ನಿರ್ದೇಶಿಸಿದ್ದು, ಮುರಳಿ ಗೋಪಿ ಸ್ಕ್ರಿಪ್ಟ್‌ ಬರೆದಿದ್ದರು. ಮಾರ್ಚ್ 28ರಂದು ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗೆ ಮಂಜು ವಾರಿಯರ್, ಟೊವಿಯೊ ಥಾಮಸ್, ಇಂದ್ರಜಿತ್, ವಿವೇಕ್ ಒಬೆರಾಯ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.