ADVERTISEMENT

Mollywood: ಮೋಹನ್‌ ಲಾಲ್‌ ನಟನೆಯ ‘ದೃಶ್ಯಂ–3’ ಏಪ್ರಿಲ್‌ನಲ್ಲಿ ತೆರೆಗೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 23:30 IST
Last Updated 7 ಜನವರಿ 2026, 23:30 IST
‘ದೃಶ್ಯಂ’ ಚಿತ್ರದ ಪೋಸ್ಟರ್‌
‘ದೃಶ್ಯಂ’ ಚಿತ್ರದ ಪೋಸ್ಟರ್‌   

ಸ್ವೀಕೆಲ್‌ ಸಿನಿಮಾಗಳು ಮೂಲ ಸಿನಿಮಾಗಳಿಗಿಂತ ಹೆಚ್ಚು ಜನಪ್ರಿಯವಾಗಿದ್ದು ಬಹಳ ವಿರಳ. ಆದರೆ ಮಲಯಾಳದ ‘ದೃಶ್ಯಂ’ ಆ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತ್ತು. ಹಿಂದಿನ ಎರಡೂ ಭಾಗಗಳು ಸೂಪರ್‌ ಹಿಟ್‌ ಆಗಿದ್ದು, ಬಹುನಿರೀಕ್ಷಿತ ‘ದೃಶ್ಯಂ–3’ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ.

ಜೀತು ಜೋಸೆಫ್‌ ನಿರ್ದೇಶಿಸಿ ಮೋಹನ್‌ ಲಾಲ್‌ ಮುಖ್ಯ ಪಾತ್ರದಲ್ಲಿರುವ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. ಜೀತು ಜೋಸೆಫ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಿನಿಮಾ ಇದೇ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

2013ರಲ್ಲಿ ತೆರೆಕಂಡ ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರ ಹೊಂದಿರುವ ‘ದೃಶ್ಯಂ’ ಸೂಪರ್‌ ಹಿಟ್‌ ಆಗಿತ್ತು. ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿಯೂ ರಿಮೇಕ್ ಆಗಿಯೂ ಯಶಸ್ಸು ಕಂಡಿತ್ತು. ಅದರ ಬಳಿಕ 2021ರಲ್ಲಿ ಬಿಡುಗಡೆಗೊಂಡ ‘ದೃಶ್ಯಂ–2’ ಕೂಡ ವ್ಯಾಪಕ ಯಶಸ್ಸು ಗಳಿಸಿತು. 

ADVERTISEMENT

ಕಥಾನಾಯಕ ಜಾರ್ಜ್‌ ಕುಟ್ಟಿಯ ಕಥೆಯೇ ಇಲ್ಲಿ ಮುಂದುವರಿಯಲಿದೆ ಎಂದು ಜೀತು ಹೇಳಿದ್ದರು. ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿಲ್‌ ಜಾನ್ಸನ್‌ ಸಂಗೀತ, ಸತೀಶ್‌ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.