ADVERTISEMENT

ಮದುವೆ ಸಮಾರಂಭದಲ್ಲಿ ಕಣ್ಣೀರು ಸುರಿಸಿದ ನಟಿ ಮೌನಿ ರಾಯ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2022, 5:58 IST
Last Updated 3 ಫೆಬ್ರುವರಿ 2022, 5:58 IST
ನಟಿ ಮೌನಿ ರಾಯ್-ಸೂರಜ್ ನಂಬಿಯಾರ್
ನಟಿ ಮೌನಿ ರಾಯ್-ಸೂರಜ್ ನಂಬಿಯಾರ್   

ಬೆಂಗಳೂರು: ಕೆಜಿಎಫ್ ಖ್ಯಾತಿಯ ನಟಿ ಮತ್ತು ರೂಪದರ್ಶಿ ಮೌನಿ ರಾಯ್ ಅವರು ತಮ್ಮ ಗೆಳೆಯ, ಉದ್ಯಮಿ ಸೂರಜ್ ನಂಬಿಯಾರ್ ಜತೆ ಕಳೆದ ವಾರ ಗೋವಾದಲ್ಲಿ ಮದುವೆಯಾಗಿದ್ದಾರೆ.

ಮದುವೆಯ ಫೋಟೊಗಳನ್ನು ಸೂರಜ್ ಮತ್ತು ಮೌನಿ ರಾಯ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದರು.

ಈ ಬಾರಿ, ಮತ್ತಷ್ಟು ಫೋಟೊ ಮತ್ತು ಮದುವೆಯ ಮಧುರ ಕ್ಷಣಗಳ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮೌನಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಮದುವೆಯ ಸಂದರ್ಭದಲ್ಲಿ ಅವರು ಆನಂದಬಾಷ್ಪ ಸುರಿಸುವ ಕ್ಷಣಗಳೂ ವಿಡಿಯೊದಲ್ಲಿ ಸೆರೆಯಾಗಿದೆ.

ನಾಗಿನ್ ಧಾರಾವಾಹಿ ಸರಣಿ ಮೂಲಕ ಮೌನಿ ಅವರು ಕಿರುತೆರೆಯಲ್ಲೂ ಜನಪ್ರಿಯತೆ ಗಳಿಸಿದ್ದಾರೆ.

ಮದುವೆ ಬಳಿಕ ನಡೆದ ಪೂಲ್‌ ಪಾರ್ಟಿ, ಮದುವೆಗೆ ಮುಂಚಿನ ಹಳದಿಸಮಾರಂಭದ ಕ್ಷಣಗಳನ್ನು ಕೂಡ ಮೌನಿ, ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.