ಶೈಲಜಾ ಪ್ರಕಾಶ್ ನಿರ್ಮಾಣದ ‘ಮೃತ್ಯುಂಜಯ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಂಗಮೇಶ್ ಎಸ್. ಸಜ್ಜನ್ ಅವರ ನಿರ್ದೇಶನ ಈ ಚಿತ್ರಕ್ಕಿದೆ.
ಸಾಮಾಜಿಕ ವಸ್ತುವಿನ ಕಥಾ ಹಂದರದ ಚಿತ್ರ ಇದು. ಆತ್ಮಹತ್ಯೆ ವಿರುದ್ಧ ಹೋರಾಟದ ಸಂದೇಶ ಇದರಲ್ಲಿದೆ. ಈ ಆಲೋಚನೆ ಮಾಡುವ ಯುವಜನರನ್ನು ಪರಿವರ್ತನೆ ಮಾಡುವ ವಿಷಯವನ್ನು ಒಳಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.ಚಿತ್ರದಲ್ಲಿ ಹಿತೇಶ್ ನಾಯಕ. ಶ್ರಿಯಾ ಶೆಟ್ಟಿ ನಾಯಕಿ. ಸುಮನ್ ನಗರ್‌ಕರ್ ಅವರು ಮನೋವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಆಟೊರಾಜ, ದುರ್ಗಾಪ್ರಸಾದ್, ಚೇತನ್‌ದುರ್ಗಾ, ಶಿವು ಮಜಾಭಾರತ, ರಂಗಭೂಮಿ ಕಲಾವಿದೆ ಪವಿತ್ರಾ, ಚೈತ್ರಾ, ಬಾಬಣ್ಣ ತಾರಾಗಣದಲ್ಲಿದ್ದಾರೆ.
ಬೆಂಗಳೂರು ಹಾಗೂ ದಾಬಸ್‌ಪೇಟೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಆನಂದ್‌ರಾಜ್ ವಿಕ್ರಂ, ಛಾಯಾಗ್ರಹಣ ವಡ್ಡೆ ದೇವೇಂದ್ರರೆಡ್ಡಿ, ಸಂಕಲನ ಸಾಯಿಸಂದೇಶ್ ಅವರದಾಗಿದೆ. ಕೊರೊನಾ ಆತಂಕದ ನಡುವೆಯೂ 198 ಗಂಟೆಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.