ADVERTISEMENT

ಕೋವಿಡ್‌: ಐಶ್ವರ್ಯಾ, ಮಗಳು ಆರಾಧ್ಯ ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

ಏಜೆನ್ಸೀಸ್
Published 27 ಜುಲೈ 2020, 11:22 IST
Last Updated 27 ಜುಲೈ 2020, 11:22 IST
ನಾನಾವತಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿರುವ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ
ನಾನಾವತಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿರುವ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ    
""

ಮುಂಬೈ: ಕೋವಿಡ್‌–19ನಿಂದ ಗುಣಮುಖರಾಗಿರುವ ನಟಿ ಐಶ್ವರ್ಯಾ ರೈ ಬಚ್ಚನ್‌ ಮತ್ತು ಅವರ ಮಗಳು ಆರಾಧ್ಯಾ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಸಿರಾಟದಲ್ಲಿ ಸಮಸ್ಯೆ ಉಂಟಾಗಿ ಅಮ್ಮ–ಮಗಳು ನಗರದ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿರುವುದರಿಂದ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಐಶ್ವರ್ಯಾ ರೈ ಪತಿ, ನಟ ಅಭಿಷೇಕ್‌ ಬಚ್ಚನ್‌ ಮತ್ತು ಮಾವ ಅಮಿತಾಬ್‌ ಬಚ್ಚನ್‌ ಅವರಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಜುಲೈ 12ರಂದು ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಅಭಿಷೇಕ್‌ ಬಚ್ಚನ್‌ ಟ್ವೀಟಿಸಿದ್ದರು. ಅವರು ಮನೆಯಲ್ಲಿಯೇ ಕ್ವಾರಂಟೈನ್‌ ಆಗಲಿದ್ದಾರೆ ಎಂದು ಪ್ರಕಟಿಸಿಕೊಂಡಿದ್ದರು. ಉಸಿರಾಟ ಸಮಸ್ಯೆ ಎದುರಾದ ಕಾರಣದಿಂದ ಜುಲೈ 17ರಂದು ರಾತ್ರಿ ಐಶ್ವರ್ಯಾ ಮತ್ತು ಆರಾಧ್ಯಾ ಆಸ್ಪತ್ರೆಗೆ ದಾಖಲಾಗಿದ್ದರು.‌

ADVERTISEMENT
ಐಶ್ವರ್ಯಾ ಮತ್ತು ಆರಾಧ್ಯಾ

ಇಂದು ಐಶ್ವರ್ಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಬಗ್ಗೆ ಅಭಿಷೇಕ್‌ ಮತ್ತೊಂದು ಟ್ವೀಟ್‌ ಮಾಡಿ ಅಭಿಮಾನಿಗಳ ಪ್ರಾರ್ಥನೆಗೆ ಧನ್ಯವಾದ ಅರ್ಪಿಸಿದ್ದಾರೆ.

ಕಳೆದ ಎರಡು ವಾರಗಳಿಂದಲೂ ಅಮಿತಾಭ್‌ ಬಚ್ಚನ್‌ ಸಾಮಾಜಿಕ ಜಾಲತಾಣದ ಮೂಲಕ ಅವರ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿದ್ದಾರೆ. ಆಸ್ಪತ್ರೆಯಲ್ಲಿರುವ ಕೋವಿಡ್‌ ವಾರ್ಡ್‌ನಿಂದಲೇ ಅವರು ತಮ್ಮ ಬ್ಲಾಗ್‌ನಲ್ಲಿ ಬರೆಯುತ್ತಿದ್ದಾರೆ. ಅಮಿತಾಭ್‌ ಕುಟುಂಬದಲ್ಲಿ ಜಯಾ ಬಚ್ಚನ್‌ ಅವರಿಗೆ ಮಾತ್ರವೇ ಸೋಂಕು ತಗುಲಿಲ್ಲ. ಬಚ್ಚನ್‌ ಕುಟುಂಬದ ನಾಲ್ವರಿಗೆ ಸೋಂಕು ಇರುವುದು ದೃಢಪಟ್ಟ ಮರುದಿನವೇ ಮುಂಬೈನ ಸ್ಥಳೀಯ ಆಡಳಿತ ಅವರ ಬಂಗಲೆಗೆ ಸೋಂಕು ನಿವಾರಕ ಔಷಧಿ ಸಿಂಪಡಿಸಿದ ಮುಂಜಾಗ್ರತಾ ಕ್ರಮಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.