ಶೋಭಿತಾ ಧೂಲಿಪಾಲಗೆ ಮಂಗಳ ಸ್ನಾನ
ಇನ್‌ಸ್ಟಾಗ್ರಾಂ
ತೆಲುಗು ನಟ ನಾಗಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಅವರ ವಿವಾಹವು ಡಿ. 4ರಂದು ನೆರವೇರಲಿದೆ. ವಿವಾಹ ಮಹೋತ್ಸವದ ಆರಂಭವು ಅರಿಶಿಣ ಶಾಸ್ತ್ರದ ಮಂಗಳ ಸ್ನಾನದೊಂದಿಗೆ ಶುಕ್ರವಾರ ಆರಂಭಗೊಂಡಿದೆ.
ಮದುವೆ ಸಮಾರಂಭದ ಚಿತ್ರ ಹಾಗೂ ವಿಡಿಯೊಗಳನ್ನು ಈ ಜೋಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಅವರ ಪುತ್ರ ನಾಗಚೈತನ್ಯ ಹಾಗೂ ನಟಿ ಸಮಂತಾ ರುತ್ ಪ್ರಭು ನಡುವಿನ ವಿವಾಹ ಮುರಿದುಬಿದ್ದ ನಂತರ, ಶೋಭಿತಾ ಅವರೊಂದಿಗೆ ನಾಗಚೈತನ್ಯ ಎರಡನೇ ವಿವಾಹವಾಗುತ್ತಿದ್ದಾರೆ.
ಸುಮಾರು ಒಂದೂವರೆ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿದ ಈ ಜೋಡಿ, ಇದೀಗ ಹಸೆಮಣೆ ಏರುವ ತವಕದಲ್ಲಿದ್ದಾರೆ.
ಈ ಜೋಡಿಯ ವಿವಾಹಕ್ಕೆ ಹೈದರಾಬಾದ್‌ನ ಅನ್ನಪೂರ್ಣಾ ಸ್ಟುಡಿಯೊದಲ್ಲಿ ಸಿದ್ಧತೆಗಳು ಆರಂಭಗೊಂಡಿವೆ. ವಿವಾಹದ ಆಮಂತ್ರಣ ಪತ್ರಿಕೆಯನ್ನೂ ಹಂಚಿಕೊಂಡಿದ್ದು, ಅದು ದಕ್ಷಿಣ ಭಾರತದ ಶೈಲಿಯಲ್ಲಿದೆ.
ಅಕ್ಟೋಬರ್ 8ರಂದು ತಮ್ಮ ವಿವಾಹ ನಿಶ್ಚಯವಾಗುತ್ತಿದ್ದಂತೆ ಶೋಭಿತಾ ಅವರೊಂದಿಗೆ ಕಪ್ಪು ವರ್ಣದ ಧಿರಿಸು ತೊಟ್ಟ ಚಿತ್ರವನ್ನು ಹಂಚಿಕೊಂಡಿದ್ದರು. ಲಿಫ್ಟ್‌ನ ಮಿರರ್ ಸೆಲ್ಫಿಯಲ್ಲಿ ಕಂಗೊಳಿಸಿದ್ದ ಈ ಜೋಡಿ, ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದನ್ನು ಬಹಿರಂಗಗೊಳಿಸಿದ್ದರು.
ನಟ ನಾಗಾರ್ಜುನ ಅಕ್ಕಿನೇನಿ ಜೊತೆ ಶೋಭಿತಾ ಧೂಲಿಪಾಲ ಹಾಗೂ ನಾಗಚೈತನ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.