ADVERTISEMENT

ಸಮಂತಾ– ನಾಗಚೈತನ್ಯ‌ ತೆರೆಯಲ್ಲೂ ಗಂಡ–ಹೆಂಡ್ತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:31 IST
Last Updated 17 ಅಕ್ಟೋಬರ್ 2018, 19:31 IST
.
.   

ಟಾಲಿವುಡ್‌ನ ಮುದ್ದಾದ ಜೋಡಿ ಎಂದು ಗುರುತಿಸಿಕೊಳ್ಳುತ್ತಿರುವ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ದಂಪತಿ ಮದುವೆಯಾದ ಬಳಿಕ ಮೊದಲ ಬಾರಿ ಸಿನಿಮಾದಲ್ಲಿ ನಾಯಕ– ನಾಯಕಿಯರಾಗಿ ನಟಿಸುತ್ತಿದ್ದಾರೆ.

ನಿರ್ದೇಶಕಶಿವ ನಿರ್ವಾಣ ಅವರ ಚಿತ್ರದಲ್ಲಿ ಈ ಜೋಡಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ವೈವಾಹಿಕ ಜೀವನದ ಜೊತೆ ಜೊತೆಗೆ ವೃತ್ತಿರಂಗದಲ್ಲೂ ಬ್ಯುಸಿಯಾಗಿದ್ದರು. ಈಗ ಇವರಿಬ್ಬರು‘ಮಜಿಲಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲೂ ಪತಿ– ಪತ್ನಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಸಾಹು ಗರಪತಿ ಹಾಗೂ ಹರೀಶ್‌ ಪೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ದಿವ್ಯಾಂಶ್‌ ಕೌಶಿಕ್‌ ಅವರು ಈ ಸಿನಿಮಾದ ಮುಖ್ಯಪಾತ್ರವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಗೋಪಿ ಸುಂದರ್‌ ಅವರ ಸಂಗೀತ ಈ ಚಿತ್ರಕ್ಕಿದೆ.

ADVERTISEMENT

ನಾಗ ಚೈತನ್ಯ ಅವರು ‘ಸವ್ಯಸಾಚಿ’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದು, ನವೆಂಬರ್‌ 2ರಂದು ಬಿಡುಗಡೆಯಾಗಲಿದೆ. ನಾಗಚೈತನ್ಯ ಹಾಗೂ ಸಮಂತಾ ಅವರು ಮದುವೆಗಿಂತ ಮೊದಲು ‘ಯೇ ಮಾಯಾ ಚೇಸಾವೆ’, ‘ಅಟೋ ನಗರ್‌ ಸೂರ್ಯ’, ‘ಮನಂ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.