ರಾಜಕುಮಾರ್ ಕೊಹ್ಲಿ
@abhishek03tyagi ಎಕ್ಸ್ ಚಿತ್ರ
ಮುಂಬೈ: ಹಾವಿನ ಸೇಡಿನ ಕುರಿತು ತೆರೆಕಂಡ ಜನಪ್ರಿಯ ಹಿಂದಿ ಚಲನಚಿತ್ರ ‘ನಾಗಿನ್’ ನಿರ್ದೇಶಕ ರಾಜ್‌ಕುಮಾರ್ ಕೊಹ್ಲಿ (95) ಶುಕ್ರವಾರ ನಿಧನರಾದರು.
ಬೆಳಿಗ್ಗೆ ಸ್ನಾನ ಮಾಡಲು ಸ್ನಾನಗೃಹಕ್ಕೆ ತೆರಳಿದ ಅವರು, ಬಹಳ ಹೊತ್ತಿನವರೆಗೂ ಹೊರಬರಲಿಲ್ಲ. ನಂತರ ಅವರ ಪುತ್ರ ಅರ್ಮಾನ್ ಬಾಗಿಲು ಒಡೆದು ನೋಡಿದಾಗ, ಕೊಹ್ಲಿ ಕೆಳಗೆ ಬಿದ್ದಿದ್ದರು. ತಕ್ಷಣ ವೈದ್ಯರನ್ನು ಕರೆಯಿಸಲಾಯಿತು. ಕೊಹ್ಲಿ ನಿಧನರಾಗಿದ್ದನ್ನು ಘೋಷಿಸಿದರು ಎಂದು ಕುಟುಂಬ ಆಪ್ತ ವಿಜಯ ಗ್ರೋವರ್ ತಿಳಿಸಿದ್ದಾರೆ.
ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ 5.30ಕ್ಕೆ ಸಾಂತಾಕ್ರೂಝ್‌ನ ಹಿಂದು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
70 ಹಾಗೂ 80ರ ದಶಕದಲ್ಲಿ ಅತ್ಯಂತ ಜನಪ್ರಿಯ ನಿರ್ದೇಶಕರೆನಿಸಿಕೊಂಡಿದ್ದ ಕೊಹ್ಲಿ, ಜಾನಿ ದುಷ್ಮನ್, ನೌಕರ್ ಬೀವಿ ಕಾ, ಬದ್ಲೇ ಕಿ ಆಗ್, ರಾಜ್ ತಿಲಕ್, ಪತಿ ಪತ್ನಿ ಔರ್ ತವಾಯಿಫ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರಸಿದ್ಧ ತಾರೆಯರಾದ ಸಂಜೀವ್ ಕುಮಾರ್, ಸುನಿಲ್ ದತ್, ಧರ್ಮೇಂದ್ರ, ಜಿತೇಂದ್ರ, ಶತ್ರುಘ್ನ ಸಿನ್ಹಾ ಹಾಗೂ ರೀನಾ ರಾಯ್ ಅವರೊಂದಿಗೆ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.