ADVERTISEMENT

ಸೆಕ್ಸ್‌ ವಿಡಿಯೊ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದವನಿಗೆ ಚಳಿ ಬಿಡಿಸಿದ ನಮಿತಾ!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 10:55 IST
Last Updated 19 ಮಾರ್ಚ್ 2020, 10:55 IST
ನಮಿತಾ
ನಮಿತಾ   

ಬೆಂಗಳೂರು: ಬಹುಭಾಷೆ ತಾರೆ, ಚೆಂದುಳ್ಳಿ ಚೆಲುವೆ, ಮಾದಕ ಮೈಮಾಟದ ನಟಿ ನಮಿತಾ ಪೋಲಿ ಯುವಕನೊಬ್ಬನಿಗೆ ಸಾಮಾಜಿಕ ಜಾಲತಾಣದಲ್ಲಿ ಚಳಿ ಬಿಡಿಸಿದ್ದಾರೆ.

ತೆಲುಗು ಮತ್ತು ಕನ್ನಡ ಸಿನಿಮಾರಂಗ ಸೇರಿದಂತೆಕಾಲಿವುಡ್‌ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಮಿತಾಗೆ ತಮಿಳುನಾಡಿನಲ್ಲಿ ದೇವಾಲಯ ಕಟ್ಟಿ ಆರಾಧಿಸುವ ಅಭಿಮಾನಿಗಳು ಇದ್ದಾರೆ. ಇತ್ತೀಚೆಗೆ ನಮಿತಾ ರಾಜಕಾರಣದಲ್ಲೂ ಸಕ್ರಿಯರಾಗಿರುವ ನಮಿತಾಗೆ ಪೋಲಿ ಯುವಕನೊಬ್ಬ ಕೀಟಲೆ ಮಾಡಿ, ಮಂಗಳಾರತಿ ಮಾಡಿಸಿಕೊಂಡಿದ್ದಾನೆ.

ನಿಮ್ಮ ಅಶ್ಲೀಲ (ಪೊರ್ನ್) ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಯುವಕನ ಫೋಟೊವನ್ನುಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅವನಿಗೆ ನಮಿತಾ ಚಳಿ ಬಿಡಿಸಿದ್ದಾರೆ.

ADVERTISEMENT

ನಿಮ್ಮ ಪೊರ್ನ್ ವಿಡಿಯೊಗಳನ್ನು ನಾನು ನೋಡಿದ್ದೇನೆ, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ ಮೇಲ್ ಮಾಡಿದ್ದ ಎಂದುನಮಿತಾ ತಮ್ಮಇನ್‌ಸ್ಟಾಗ್ರಾಂನಲ್ಲಿ ಆ ಯುವಕನಇನ್‌ಸ್ಟಾಗ್ರಾಂ ಖಾತೆಯ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.

ಯುವಕನ ಪೋಟೊವನ್ನು ಶೇರ್ ಮಾಡಿರುವ ನಮಿತಾ, ನನಗೆ ಕೆಟ್ಟದಾಗಿ ಸಂದೇಶಗಳನ್ನು ಕಳುಹಿಸಿ, ಗೌರವಯುತವಲ್ಲದ ಪದಗಳನ್ನು ಬಳಕೆ ಮಾಡಿ, ನನ್ನ ಪೋರ್ನ್ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೇಳಿದ್ದ. ಸಾರ್ವಜನಿಕ ಜೀವನದಲ್ಲಿ ಇರುವ ಕಾರಣಕ್ಕೆ ನಾನು ಈ ರೀತಿಯಲ್ಲ ಕರೆಸಿಕೊಳ್ಳಬೇಕೇ ಎಂದು ಪ್ರಶ್ನೆ ಮಾಡಿರುವ ಅವರು ಮೊದಲ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿ ಎಂದು ಹೇಳಿದ್ದಾರೆ. ಒಬ್ಬ ನಿಜವಾದ ಪುರುಷ ಮಹಿಳೆಯನ್ನು ಯಾವ ರೀತಿ ಗೌರವಿಸಬೇಕು ಎಂಬುದನ್ನು ತಿಳಿದಿರುತ್ತಾನೆ ಎಂದು ಬರೆದಿರುವ ನಮಿತಾ, ತಮ್ಮಗಾದ ಕೆಟ್ಟ ಅನುಭವಗಳನ್ನು ವಿವರವಾಗಿ ಬರೆದುಕೊಂಡಿದ್ದಾರೆ.

ಇದಕ್ಕೆ ಸಾಕಷ್ಟು ಅಭಿಮಾನಿಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಮಿತಾ ಅಭಿಮಾನಿಗಳು ಅವನಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಮಿತಾ ಆ ಯುವಕನ ಚಿತ್ರ ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ನಮಿತಾ ಧೈರ್ಯ ಮೆಚ್ಚುವಂತಹದು, ಇನ್ನು ಮುಂದೆ ಕಿರುಕುಳ ಅನುಭವಿಸುವ ಮಹಿಳೆಯರು ಇದೇ ರೀತಿ ಮಾಡಲಿ ಎಂದು ಹಲವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.