ADVERTISEMENT

ನಟ ನಾಸಿರುದ್ದೀನ್ ಷಾ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2021, 12:51 IST
Last Updated 8 ಜುಲೈ 2021, 12:51 IST
ನಾಸಿರುದ್ದೀನ್ ಷಾ
ನಾಸಿರುದ್ದೀನ್ ಷಾ   

ಮುಂಬೈ:ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್ ಷಾ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಾಸಿರುದ್ದೀನ್ ಷಾ ಪುತ್ರ ವಿವಾನ್‌ ಷಾ ಅವರು ತಂದೆಯವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದಬುಧವಾರ ಬೆಳಗ್ಗೆ ಬಿಡುಗಡೆಯಾದರು ಎಂದು ಪೋಟೊ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದನಾಸಿರುದ್ದೀನ್ ಷಾ ಅವರನ್ನುಜೂನ್‌ 30ರಂದು ಇಲ್ಲಿನಖಾರ್‌ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಶ್ವಾಸಕೋಶದಲ್ಲಿ ನ್ಯೂಮೋನಿಯಾದ ಸಣ್ಣ ಪ್ಯಾಚ್‌ಗಳಿರುವುದು ಪತ್ತೆಯಾಗಿತ್ತು. ವೈದ್ಯರು ಕಳೆದೊಂದು ವಾರದಿಂದ ಅವರಿಗೆ ಚಿಕಿತ್ಸೆ ನೀಡಿದ್ದರು.

ADVERTISEMENT

ಪೂರ್ಣ ಗುಣಮುಖರಾಗಿ ಅವರು ಮನೆಗೆ ಮರಳಿದ್ದಾರೆ ಎಂದುನಾಸಿರುದ್ದೀನ್‌ ಷಾ ಅವರ ಪತ್ನಿ ರತ್ನಾ ಪಾಠಕ್‌ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.