ADVERTISEMENT

ಅನುಷ್ಕಾ ಶೆಟ್ಟಿ ಜತೆಯಾದ ನವೀನ್‌ ಪೊಲಿಶೆಟ್ಟಿ!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 12:30 IST
Last Updated 27 ಡಿಸೆಂಬರ್ 2021, 12:30 IST
ಅನುಷ್ಕಾ, ನವೀನ್‌
ಅನುಷ್ಕಾ, ನವೀನ್‌   

ಹೈದರಾಬಾದ್‌: ಬಹುಭಾಷೆ ತಾರೆ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿ ಹಾಗೂ ನಟ ನವೀನ್‌ ಪೊಲಿಶೆಟ್ಟಿ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನೂತನ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆ. ರಾರಾ ಕೃಷ್ಣಯ್ಯ ಚಿತ್ರದ ನಿರ್ದೇಶಕ ಪಿ. ಮಹೇಶ್‌ ಬಾಬು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಯುವಿ ಸಂಸ್ಥೆಯು ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ಭಾನುವಾರ (ಡಿ.26) ನವೀನ್‌ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಅದೇ ದಿನ ಸಿನಿಮಾವನ್ನು ಘೋಷಣೆ ಮಾಡಲಾಗಿದೆ. ಚಿತ್ರದ ಟೈಟಲ್‌ ಹಾಗೂ ಪಾತ್ರವರ್ಗ ಇನ್ನು ಅಂತಿಮವಾಗಿಲ್ಲ ಎಂದಿರುವ ನಿರ್ದೇಶಕರು ಕೆಲವೇ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.

ADVERTISEMENT

ಈ ಸಿನಿಮಾ ತೆಲುಗು, ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.

ಅನುಷ್ಕಾ ಹಾಗೂ ನವೀನ್‌ ಅವರು ಹಲವು ವರ್ಷಗಳಿಂದ ತೆಲುಗು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.