ನಟಿ ನವ್ಯಾ ನಾಯರ್
ನವದೆಹಲಿ: ಬ್ಯಾಗ್‌ನಲ್ಲಿ ಮಲ್ಲಿಗೆ ಹೂವು ತಂದಿದ್ದಕ್ಕೆ ಮಲಯಾಳಂ ನಟಿ ನವ್ಯಾ ನಾಯರ್ ಅವರನ್ನು ತಡೆದ ಆಸ್ಟ್ರೇಲಿಯಾದ ಮೆಲ್ಬರ್ನ್ ವಿಮಾನ ನಿಲ್ದಾಣದ ಸಿಬ್ಬಂದಿ ದಂಡ ವಿಧಿಸಿದ್ದಾರೆ.
ಓಣಂ ಕಾರ್ಯಕ್ರಮದಲ್ಲಿ ಭಾಗಿಯಾಗಿಲು ಮೆಲ್ಬರ್ನ್‌ಗೆ ತೆರಳಿದ್ದ ನವ್ಯಾ ಅವರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಅವರ ಬ್ಯಾಗ್‌ನಲ್ಲಿ 15 ಸೆಂ.ಮೀ ಉದ್ದದ ಮಲ್ಲಿಗೆ ಮಾಲೆ ದೊರೆತಿದೆ.
ದೇಶದ ಕೃಷಿ ಮತ್ತು ಪರಿಸರಕ್ಕೆ ಗಂಭೀರ ಹಾನಿಯುಂಟು ಮಾಡಬಹುದು ಎನ್ನುವ ಕಾರಣಕ್ಕೆ ಆಸ್ಟ್ರೇಲಿಯಾದಲ್ಲಿ ಜೈವಿಕ ಭದ್ರತೆ ಮತ್ತು ಕಸ್ಟಮ್ಸ್ ಕಾನೂನುಗಳ ಅಡಿಯಲ್ಲಿ, ತಾಜಾ ಹೂವುಗಳು, ಗಿಡಗಳಂತಹ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇದೇ ಕಾರಣ ನೀಡಿರುವ ಆಸ್ಟ್ರೇಲಿಯಾದ ಕೃಷಿ ಇಲಾಖೆಯು ನಟಿಗೆ 1980 ಆಸ್ಟ್ರೇಲಿಯನ್ ಡಾಲರ್ (ಸುಮಾರು ₹1.14 ಲಕ್ಷ) ದಂಡ ವಿಧಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನವ್ಯಾ ಅವರು, ವಿಮಾನ ನಿಲ್ದಾಣದಲ್ಲಿ ಆಹಾರ ತೆಗೆದುಕೊಳ್ಳುತ್ತಿರುವುದು, ವಿಮಾನ ಹತ್ತುವುದು, ಮಲ್ಲಿಗೆ ಹೂವು ಮುಡಿದು ಸೀರೆಯುಟ್ಟು ಸಂಭ್ರಮಿಸುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನವ್ಯಾ ಅವರು ಹಂಚಿಕೊಂಡಿದ್ದಾರೆ. ‘ದಂಡ ಪಾವತಿಸುವ ಮುನ್ನ’ ಎಂಬ ಒಕ್ಕಣೆಯನ್ನೂ ಹಾಕಿಕೊಂಡಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
2021ರಲ್ಲಿ ಇಷ್ಟಂ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿರುವ ನವ್ಯಾ, ಕನ್ನಡದ ಗಜ, ದೃಶ್ಯಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.