ADVERTISEMENT

ಹಸೆಮಣೆ ಏರಲು ನಯನತಾರಾ ರೆಡಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 19:30 IST
Last Updated 30 ಸೆಪ್ಟೆಂಬರ್ 2019, 19:30 IST
ಶಿವನ್‌ ಜೊತೆ ನಟಿ ನಯನತಾರಾ
ಶಿವನ್‌ ಜೊತೆ ನಟಿ ನಯನತಾರಾ   

ನಟಿ ನಯನತಾರಾ ಹಾಗೂ ಅವರ ಗೆಳೆಯ ವಿಘ್ನೇಶ್‌ ಶಿವನ್‌ ಇದೇ ಡಿಸೆಂಬರ್‌ 25ಕ್ಕೆ ಹಸೆಮಣೆ ಏರಲಿದ್ದಾರೆ. ಅವರಿಬ್ಬರು ವಿದೇಶದಲ್ಲಿ ಮದುವೆಯಾಗಲು ತೀರ್ಮಾನಿಸಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ.

ನಯನತಾರಾ ಹಾಗೂ ವಿಘ್ನೇಶ್‌ ಶಿವನ್‌ ಪ್ರೀತಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಆಗಾಗ್ಗೆ ಕೇಳಿಬರುತ್ತಿತ್ತು. ಪಾರ್ಟಿ, ಪ್ರಚಾರ ಕಾರ್ಯಕ್ರಮ ಹಾಗೂ ಸಿನಿಮಾ ಪ್ರದರ್ಶನ...ಹೀಗೆ ಎಲ್ಲಾ ಕಡೆ ಅವರಿಬ್ಬರು ಒಟ್ಟಿಗೆ ಕಾಣಿಸುತ್ತಿದ್ದರು. ಈಗ ಮದುವೆಯಾಗಲು ನಯನತಾರಾ ನಿರ್ಧರಿಸಿದ್ದು, ಇದೇ ಡಿಸೆಂಬರ್‌ 25ಕ್ಕೆ ದಿನ ನಿಗದಿಯಾಗಿದೆ ಎನ್ನಲಾಗಿದೆ.

ಮದುವೆ ಸಮಾರಂಭ ವಿದೇಶದಲ್ಲಿ ನಡೆಯಲಿದ್ದು, ಹಿಂದೂ ಸಂಪ್ರದಾಯದಂತೆ ಅಥವಾ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾಗಲಿದ್ದಾರಾ? ಎಂದು ಗೊತ್ತಾಗಿಲ್ಲ. ಈ ಮದುವೆಯಲ್ಲಿ ಟಾಲಿವುಡ್ ಹಾಗೂ ಕಾಲಿವುಡ್‌ನ ನಟ–ನಟಿಯರು, ತಂತ್ರಜ್ಞರು ಭಾಗವಹಿಸಲಿದ್ದಾರೆ. ನಯನತಾರಾ ಇಲ್ಲಿಯವರೆಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹೇಳಿಕೊಂಡಿಲ್ಲ. ಮದುವೆ ವಿಚಾರವನ್ನಾದರೂ ಅವರು ಘೋಷಣೆ ಮಾಡುತ್ತಾರಾ? ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ADVERTISEMENT

ನಯನತಾರಾ ನಟಿಸಿರುವ ‘ಸೈರಾ ನರಸಿಂಹರೆಡ್ಡಿ’ ಚಿತ್ರ ಅಕ್ಟೋಬರ್‌ 2ಕ್ಕೆ ಬಿಡುಗಡೆಯಾಗಲಿದೆ. ಹಾಗೇ ವಿಜಯ್‌ ಅಭಿನಯದ ‘ಬಿಗಿಲ್‌’ ಹಾಗೂ ರಜನಿಕಾಂತ್‌ ಅಭಿನಯದ ‘ದರ್ಬಾರ್‌’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.