ADVERTISEMENT

‘ಪ್ರಗತಿಪರ’ ಸಿನಿಮಾ ಅಸಾಧ್ಯ ಎಂದ ನೀನಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:30 IST
Last Updated 17 ಡಿಸೆಂಬರ್ 2019, 19:30 IST
ನೀನಾ ಗುಪ್ತಾ
ನೀನಾ ಗುಪ್ತಾ   

ಬಾಲಿವುಡ್‌ ಸಿನಿಮಾಗಳು ‘ಪ್ರಗತಿಪರ’ ಧೋರಣೆ ಹೊಂದಿರಲು ಸಾಧ್ಯವಿಲ್ಲ. ಏಕೆಂದರೆ ಭಿನ್ನ ಹಾಗೂ ಸಮಾಜದ ನಂಬಿಕೆಗಳನ್ನು ಮೀರುವ ಕಥಾಹಂದರ ಇರುವ ಸಿನಿಮಾಗಳನ್ನು ವೀಕ್ಷಕರು ಇನ್ನೂ ಒಪ್ಪಿಕೊಂಡಿಲ್ಲ ಎಂದು ನಟಿ ನೀನಾ ಗುಪ್ತಾ ಹೇಳಿದ್ದಾರೆ.

ಪುರುಷರು ಮಹಿಳೆಯರನ್ನು ಶತಮಾನಗಳಿಂದ ಬಾಯಿ ಮುಚ್ಚಿಸಿ ಕೂರಿಸಿದ್ದಾರೆ. ಈ ವ್ಯವಸ್ಥೆಯನ್ನು ಮೀರುವ ಸಿನಿಮಾ ಮಾಡಲು ಇನ್ನೂ ಸಮಯ ಬೇಕು ಎನ್ನುವುದು ಅವರ ಅಭಿಪ್ರಾಯ.

‘ನಮ್ಮ ಸಿನಿಮಾಗಳು ಪ್ರಗತಿಪರ ಕಥಾಹಂದರ ಹೊಂದಿರಲು ಸಾಧ್ಯವಿಲ್ಲ. ಒಂದುವೇಳೆ ಪ್ರಗತಿಪರ ಕಥಾಹಂದರ ಇರುವ ಸಿನಿಮಾ ಮಾಡಿದರೆ, ಅದನ್ನು ಯಾರೂ ವೀಕ್ಷಿಸುವುದಿಲ್ಲ. ಏಕೆಂದರೆ, ಅಂತಹ ಸಿನಿಮಾ ನೋಡಲು ನಮ್ಮ ವೀಕ್ಷಕರು ಇನ್ನೂ ಸಿದ್ಧರಾಗಿಲ್ಲ’ ಎಂದು ನೀನಾ ಅವರು ಸುದ್ದಿಸಂಸ್ಥೆ ಪಿಟಿಐ ಬಳಿ ಹೇಳಿದ್ದಾರೆ.

ADVERTISEMENT

‘ನಾನು ಸಿಸ್ಕಿ ಎನ್ನುವ ಕಾರ್ಯಕ್ರಮ ಮಾಡಿದ್ದೆ. ಅದು ಯಶಸ್ಸು ಕಾಣಲಿಲ್ಲ. ಅದರಲ್ಲಿ ನಾನು ಸೇನೆಯಲ್ಲಿರುವ ವ್ಯಕ್ತಿಯೊಬ್ಬರನ್ನು ಮದುವೆ ಆಗುತ್ತೇನೆ. ಆ ವ್ಯಕ್ತಿ ಒಳ್ಳೆಯವ, ಅದರೆ ಬೋರಿಂಗ್ ಮನುಷ್ಯ. ನಾನು ನನ್ನ ಪತಿಯ ಸ್ನೇಹಿತನ ಕಡೆ ಆಕರ್ಷಿತನಾಗುತ್ತೇನೆ. ಈ ಕಾರ್ಯಕ್ರಮ ಚೆನ್ನಾಗಿ ನಡೆಯಲಿಲ್ಲ. ಇಂತಹ ಕಾರ್ಯಕ್ರಮ ನೋಡಲು ಪುರುಷರು ಮಹಿಳೆಯರಿಗೆ ಯಾವತ್ತೂ ಬಿಡುವುದಿಲ್ಲ ಎನ್ನುವುದು ನನ್ನ ಅನಿಸಿಕೆ. ಸಮಾಜ ಹೇಗಿದೆಯೋ ಅದೇ ರೀತಿಯ ಕಾರ್ಯಕ್ರಮಗಳು, ಸಿನಿಮಾಗಳು ಸಿದ್ಧವಾಗುತ್ತವೆ’ ಎಂದರು.

ತಲೆಮಾರಿನಿಂದ ತಲೆಮಾರಿಗೆ ದಾಟಿಕೊಂಡು ಬಂದಿರುವ ಪೂರ್ವಗ್ರಹಗಳನ್ನು ನಿವಾರಿಸಲು ತಾವು ನಿರಂತರ ಯತ್ನ ನಡೆಸಿರುವುದಾಗಿ ಈ ನಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.