ನೀತಿ ಮೋಹನ್
ಗಾಯಕಿ ನೀತಿ ಮೋಹನ್ ಅವರು ತಮ್ಮ ವೃತ್ತಿಜೀವನ, ತಾಯ್ತನದ ಬಳಿಕ ತೂಕ ಹೆಚ್ಚಳ, ಮಾನಸಿಕ ಆರೋಗ್ಯದ ಕಾಳಜಿ ಕುರಿತ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಾಯಕಿ ನೀತಿ ಮೋಹನ್ ಅವರು 'ತು ನೇ ಮೇರಿ ಎಂಟ್ರಿಯಾನ್‘, ‘ಬ್ಯಾಂಗ್ ಬ್ಯಾಂಗ್‘, ‘ನೈನಾವಾಲೇ ನೇ‘ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ.
ಜೀವನ ಶೈಲಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನೀತಿ ಮೋಹನ್ ಅವರು, ‘ನಾನು ಶಿಸ್ತಿನ ಜೀವನ ಶೈಲಿಗೆ ಆದ್ಯತೆ ನೀಡುತ್ತೇನೆ. ಸಮಯ ಪಾಲನೆ, ಹಾಡುಗಳನ್ನು ನಿರಂತರವಾಗಿ ಅಭ್ಯಾಸ ಮಾಡುತ್ತೇನೆ. ಗಾಯಕರು ಎಂದರೆ ಕೇವಲ ವೇದಿಕೆಯ ಮೇಲೆ ಹಾಡುವುದಲ್ಲ. ಅದರ ಹಿಂದೆ ಪ್ರತಿನಿತ್ಯ ಅಭ್ಯಾಸ ಮಾಡಲೇಬೇಕು’ ಎಂದು ಹೇಳಿಕೊಂಡಿದ್ದಾರೆ.
ಗಾಯಕಿ ನೀತಿ ಮೋಹನ್
‘ನನ್ನ ಧ್ವನಿಯಿಂದ ಜನರು ನನ್ನನ್ನು ಗುರುತಿಸುತ್ತಾರೆ ಎಂದರೆ, ಒಬ್ಬ ಕಲಾವಿದೆಯಾಗಿ ತಮ್ಮ ಧ್ವನಿಯನ್ನು ಕಾಪಾಡಿಕೊಳ್ಳಲು ಇಚ್ಛಿಸುತ್ತೇನೆ. ಅದಕ್ಕಾಗಿ ಐಸ್‌ಕ್ರೀಮ್, ತಂಪು ಪಾನೀಯಗಳನ್ನು ಹಾಗೂ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡುವುದಿಲ್ಲ’ ಎಂದು ನೀತಿ ಮೋಹನ್ ಹೇಳಿದ್ದಾರೆ.
ತಾಯ್ತನದ ವೇಳೆ ಸಹಜವಾಗಿ ದೇಹದ ತೂಕ ಹೆಚ್ಚಾಗುತ್ತದೆ. ಆ ಪ್ರಕ್ರಿಯೆ ಬಗ್ಗೆ ಚಿಂತಿಸುವ ಬದಲು ಆನಂದಿಸಬೇಕು. ಪ್ರತಿದಿನ ಯೋಗ, ವ್ಯಾಯಾಮ ಮಾಡಿ ಮಾನಸಿಕ ಆರೋಗ್ಯದ ಜೊತೆ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು ಎಂದು ಗಾಯಕಿ ನೀತಿ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.