
ಪ್ರಜಾವಾಣಿ ವಾರ್ತೆ
ಸಿನಿ ಪತ್ರಕರ್ತ ಅಫ್ಜಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ನೆನಪುಗಳ ಮಾತು ಮಧುರ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
‘ನಾಲ್ಕು ಕಥೆಗಳ ಸಂಗಮ. ಒಂದು ಕಥೆ ಇಪ್ಪತ್ತೈದು ನಿಮಿಷಗಳ ಅವಧಿ ಇರುತ್ತದೆ. ನಾಲ್ಕು ಕಥೆಗಳು ಬೇರೆಯದೆ ಆಯಾಮದಲ್ಲಿ ಸಾಗುತ್ತವೆ. ನಾವು ಎದುರುಸುತ್ತಿರುವ ಹಾಗೂ ನೋಡುತ್ತಿರುವ ಕೆಲವು ವಿಷಯಗಳೆ ಈ ಚಿತ್ರದ ಕಥೆಗೆ ಸ್ಫೂರ್ತಿ. ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.
ಸೆವೆನ್ ರಾಜ್ ನಾಯಕನಾಗಿ ನಟಿಸುವುದರ ಜತೆಗೆ ಬಂಡವಾಳವನ್ನೂ ಹೂಡಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜ್ ಪ್ರಭು, ಅಂಜಲಿ, ರೇಖಾ ರಮೇಶ್ ಮುಂತಾದವರು ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.