ADVERTISEMENT

ಸ್ನೇಹಿತೆಯರ ಜೊತೆ ಸ್ಕೂಬಾ ಡೈವಿಂಗ್ ಮಾಡಿದ ನಟಿ ನಿಶ್ವಿಕಾ ನಾಯ್ಡು: ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2025, 6:09 IST
Last Updated 21 ಅಕ್ಟೋಬರ್ 2025, 6:09 IST
<div class="paragraphs"><p>ನಟಿ ನಿಶ್ವಿಕಾ ನಾಯ್ಡು&nbsp;</p></div>

ನಟಿ ನಿಶ್ವಿಕಾ ನಾಯ್ಡು 

   

ಚಿತ್ರ: ಇನ್‌ಸ್ಟಾಗ್ರಾಮ್

‘ಜಂಟಲ್‌ಮನ್’, ‘ಗುರು ಶಿಷ್ಯರು’ ಚಿತ್ರಗಳಲ್ಲಿನ ನಟನೆಗೆ ಹೆಸರುವಾಸಿಯಾದ ನಟಿ ನಿಶ್ವಿಕಾ ನಾಯ್ಡು ಅವರು ಸ್ನೇಹಿತರ ಜೊತೆಗೆ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ನಟಿ ನಿಶ್ವಿಕಾ ಅವರು ‘ಅಮ್ಮ ಐ ಲವ್‌ ಯೂ’ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪ್ರವೇಶಿಸಿದರು.

ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿರುವ ನಿಶ್ವಿಕಾ ರಿಯಾಲಿಟಿ ಶೋನಲ್ಲಿ ತೀರ್ಪುಗಾರ್ತಿಯಾಗಿ ಗಮನ ಸೆಳೆದಿದ್ದಾರೆ. ನಟ ಪ್ರಭುದೇವ ಮತ್ತು ಶಿವರಾಜ್‌ಕುಮಾರ್ ನಟನೆಯ ‘ಕರಟಕ ದಮನಕ’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಯೋಗ, ಫಿಟ್‌ನೆಸ್‌ ಅಂತ ಜಿಮ್‌ನಲ್ಲಿ ಕಾಲ ಕಳೆಯುತ್ತಿದ್ದ ನಿಶ್ವಿಕಾ ನಾಯ್ಡು ಈಗ ಹೊಸ ಸಾಹಸಕ್ಕೆ ದುಮುಕಿದ್ದಾರೆ.

ಸಾಮಾಜಿಕ ಮಾಧ್ಯಮಲ್ಲಿ ನಿಶ್ವಿಕಾ ನಾಯ್ಡು ಸ್ಕೂಬಾ ಡೈವಿಂಗ್ ಮಾಡಿರುವ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ನನ್ನ ಶಕ್ತಿಶಾಲಿ ಹುಡುಗಿಯರ ಜೊತೆ ನೀರಿನ ಆಳದಲ್ಲಿ ಮೋಜೋ ಜೋಜೋ ಹುಡುಕಲು ಹೋಗಿದ್ದೆ’ ಎಂದು ಬರೆದುಕೊಂಡಿದ್ದಾರೆ. ಸಮುದ್ರದ ಆಳಕ್ಕೆ ಇಳಿದು ಜಲಚರ ಪ್ರಾಣಿಗಳನ್ನು ಹತ್ತಿರದಿಂದ ನೋಡಿ ಖುಷಿಪಟ್ಟಿದ್ದಾರೆ.