ಬಹುತೇಕ ಹೊಸಬರಿಂದಲೇ ಕೂಡಿರುವ ‘ಓಮೆನ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿಬಿನ್.ಎಸ್.ಸಂತೋಷ್ ನಿರ್ದೇಶನದ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
‘ಓಮೆನ್’ ಎಂದರೆ ಶಕುನ ಎಂಬ ಅರ್ಥವಿದೆ. ಇದು ನಮ್ಮ ಕಥೆಗೂ ಒಂದು ರೀತಿಯ ಬೇರೆ ಅರ್ಥವನ್ನು ನೀಡುತ್ತಿದೆ. ಇದೊಂದು ಫೌಂಡ್ ಫುಟೇಜ್‌ನಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ. ಒಂದು ಮನೆಯ ಸುತ್ತ ನಡೆಯುವಂತಹ ಘಟನೆ. ಭೂತ ಬಂಗಲೆಗೆ ಇಬ್ಬರು ಪ್ರವೇಶ ಮಾಡುತ್ತಾರೆ. ಅದರಲ್ಲಿ ನಾಯಕ ಅಜಯ್ ಕುಮಾರ್ ಯೂಟ್ಯೂಬರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ನೀಶ್ಮಾ ಶೆಟ್ಟಿ ಪ್ಯಾರಾನಾರ್ಮಲ್ ರಿಸರ್ಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆನೇಕಲ್ ಸಮೀಪದಲ್ಲಿರುವ ಹಳೆಯ ಕಟ್ಟಡದಲ್ಲಿ ನಮಗೆ ಬೇಕಾದ ರೀತಿ ಸೆಟ್‌ಗಳನ್ನು ಹಾಕಿಕೊಂಡು ಚಿತ್ರೀಕರಿಸಿದ್ದೇವೆ. ವಿಎಫ್‌ಎಕ್ಸ್, ಸಂಕಲನಗಳನ್ನು ನಾನೇ ನಿಭಾಯಿಸಿರುವೆ’ ಎಂದರು ನಿರ್ದೇಶಕರು.
ಅಜಯ್ ಕುಮಾರ್ ಮತ್ತು ವಿ.ಮಿರುನಳಿನಿ ಬಂಡವಾಳ ಹೂಡಿದ್ದಾರೆ. ‘ನಾನು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಟ, ನಿರ್ದೇಶಕ ಕಾಶಿನಾಥ್ ಅವರ ಕೊನೆಯ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಆ ಅನುಭವದಿಂದ ಚಿತ್ರ ನಿರ್ಮಾಣದ ಜತೆ ನಾಯಕನಾಗಿ ಅಭಿನಯಿಸಿದ್ದೇನೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಯೋಜನೆಯಿದೆ’ ಎಂದರು ಅಜಯ್.
ಭುವನ್ ಶಂಕರ್ ಹಾಗೂ ಸನ್‌ಸ್ಕಾರ್ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.