ADVERTISEMENT

Academy Awards: ಆಸ್ಕರ್‌ ಸ್ಪರ್ಧೆಗೆ ಭಾರತದ ‘ಹೋಂಬೌಂಡ್‌’ ಪ್ರವೇಶ

ಪಿಟಿಐ
Published 19 ಸೆಪ್ಟೆಂಬರ್ 2025, 22:59 IST
Last Updated 19 ಸೆಪ್ಟೆಂಬರ್ 2025, 22:59 IST
<div class="paragraphs"><p>ಆಸ್ಕರ್‌ ಪ್ರಶಸ್ತಿ</p></div>

ಆಸ್ಕರ್‌ ಪ್ರಶಸ್ತಿ

   

ಕೋಲ್ಕತ್ತ: 2026ನೇ ಸಾಲಿನ ಆಸ್ಕರ್‌ ‍ಪ್ರಶಸ್ತಿಯ ‘ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್‌ ಸಿನಿಮಾ’ ವಿಭಾಗಕ್ಕೆ ಹಿಂದಿ ಭಾಷೆಯ ‘ಹೋಂಬೌಂಡ್‌’ ಸಿನಿಮಾವು ಅಧಿಕೃತ ಪ್ರವೇಶ ಪಡೆದಿದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎನ್‌.ಚಂದ್ರ ಶುಕ್ರವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಕರ್‌ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸಲು ವಿವಿಧ ಭಾಷೆಯ 24 ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಎಂದರು.

ADVERTISEMENT

ಆಯ್ಕೆ ಸಮಿತಿಯು ನಿರ್ಮಾಪಕರು, ನಿರ್ದೇಶಕರು, ಬರಹಗಾರರು, ಸಂಕಲನಕಾರರು ಮತ್ತು ಪತ್ರಕರ್ತರು ಸೇರಿ 12 ಮಂದಿಯನ್ನು ಒಳಗೊಂಡಿತ್ತು ಎಂದು ತಿಳಿಸಿದರು.

‘ಹೋಂಬೌಂಡ್‌’ ಸಿನಿಮಾವನ್ನು ಕರಣ್‌ ಜೋಹರ್ ಮತ್ತು ಅದಾರ್‌ ಪೂನಾವಾಲಾ ಅವರು ನಿರ್ಮಿಸಿದ್ದು, ನೀರಜ್‌ ಘಾಯ್‌ವಾನ್‌ ನಿರ್ದೇಶಿಸಿದ್ದಾರೆ. ಇಶಾನ್‌ ಖಟ್ಟರ್‌, ವಿಶಾಲ್‌ ಜೇತ್ವಾ ಮತ್ತು ಜಾಹ್ನವಿ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಉತ್ತರ ಭಾರತದ ಸಣ್ಣ ಗ್ರಾಮದ ಇಬ್ಬರು ಬಾಲ್ಯ ಸ್ನೇಹಿತರು ಪೊಲೀಸ್‌ ಹುದ್ದೆಯ ಬೆನ್ನುಬೀಳುವ  ಕಥಾಹಂದರವನ್ನು ಸಿನಿಮಾವು ಒಳಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.