ADVERTISEMENT

ಇಂದು ‘ಪೈಲ್ವಾನ್‌’ ಹೊಸ ಬಾಕ್ಸಿಂಗ್‌ ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 8:23 IST
Last Updated 4 ಜೂನ್ 2019, 8:23 IST
‘ಪೈಲ್ವಾನ್’ ಚಿತ್ರದಲ್ಲಿ ನಟ ಸುದೀಪ್
‘ಪೈಲ್ವಾನ್’ ಚಿತ್ರದಲ್ಲಿ ನಟ ಸುದೀಪ್   

ಕೃಷ್ಣ ನಿರ್ದೇಶನದ ನಟ ಸುದೀಪ್‌ ನಟನೆಯ ‘ಪೈಲ್ವಾನ್‌’ ಚಂದನವನದಲ್ಲಿ ಭಾರೀ ಕುತೂಹಲ ಮೂಡಿಸಿರುವ ಚಿತ್ರ. ಆಗಸ್ಟ್‌ 8ರಂದು ಈ ಚಿತ್ರದ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದೆ. ಎಂಟು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಅಂದಹಾಗೆ ‘ಪೈಲ್ವಾನ್‌’ ಚಿತ್ರದ ಮೊಟ್ಟಮೊದಲ ‘ಬಾಕ್ಸಿಂಗ್ ಪೋಸ್ಟರ್‌’ ಜೂನ್ 4ರಂದು ಸಂಜೆ 4ಗಂಟೆಗೆ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೃಷ್ಣ ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದಾರೆ.

ಪ್ರಸ್ತುತ ಕನ್ನಡದ ಸಿನಿಮಾಗಳಿಗೆ ಹೊರರಾಜ್ಯಗಳಲ್ಲೂ ಮಾರುಕಟ್ಟೆ ವಿಸ್ತರಣೆಗೊಂಡಿದೆ. ‘ಕೆ.ಜಿ.ಎಫ್‌’ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡಿತ್ತು. ‘ಪೈಲ್ವಾನ್‌’ ಎಂಟು ಭಾಷೆಗಳಲ್ಲಿ ತೆರೆಕಾಣುತ್ತಿರುವುದ ಕನ್ನಡ ಚಿತ್ರರಂಗದಮಟ್ಟಿಗೆ ಹೊಸ ದಾಖಲೆ.

ADVERTISEMENT

ನಟರಾದ ಚಿರಂಜೀವಿ, ಮೋಹನ್‌ ಲಾಲ್‌, ಸುನೀಲ್‌ ಶೆಟ್ಟಿ,ಕಿಚ್ಚ ಸುದೀಪ್‌ ಸಮ್ಮುಖದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಚಿತ್ರದಹೊಸಪೋಸ್ಟರ್‌ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ದೇಶಕ ಕೃಷ್ಣ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.