ADVERTISEMENT

ಗಾಳಿ ಸುದ್ದಿಗೆ ತುಪ್ಪ ಸುರಿದ ಪರಿಣಿತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:45 IST
Last Updated 28 ಜುಲೈ 2019, 19:45 IST
ಪರಿಣಿತಿ
ಪರಿಣಿತಿ   

ಕಳೆದ ಎರಡು ವರ್ಷಗಳಿಂದ ನಟಿ ಪರಿಣಿತಿ ಚೋಪ್ರಾ ಸಹಾಯಕ ನಿರ್ದೇಶಕ ಚರಿತ್‌ ದೇಸಾಯಿ ಜೊತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿ ಗುಲ್ಲು ಎದ್ದಿತ್ತು. ಈ ಗಾಳಿಸುದ್ದಿ ಬಗ್ಗೆ ಪರಿಣಿತಿ ಮಾತನಾಡಿದ್ದು, ಆದರೆ ಅಡ್ಡ ಗೋಡೆ ದೀ‍ಪ ಇಟ್ಟಂತೆ ಹೌದು ಆದರೆ ಇಲ್ಲ ಎಂಬಂತೆ ಉತ್ತರಿಸಿದ್ದಾರೆ.

ಪರಿಣಿತಿ ಚೋಪ್ರಾ ಸಂಬಂಧಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿ ಪತಿ ನಿಕ್‌ ಜೋನಸ್‌ ಜೊತೆ ವಿದೇಶದಲ್ಲಿದ್ದಾರೆ. ಇಲ್ಲಿ ಪರಿಣಿತಿ ಅವರ ಹೆಸರು ಚರಿತ್‌ ದೇಸಾಯಿ ಜೊತೆ ತಳುಕು ಹಾಕಿಕೊಂಡಿದೆ. ಇವರಿಬ್ಬರ ಪ್ರೇಮಸುದ್ದಿಗಳ ಬಗ್ಗೆ ಅನೇಕ ಬಾರಿ ಸುದ್ದಿಗಳು ಪ್ರಕಟವಾಗಿವೆ. ಆದರೆ ಇದರ ಬಗ್ಗೆ ಮಾತ್ರ ಪರಿಣಿತಿ ಇಲ್ಲಿಯವೆರಗೂ ಏನೂ ಬಾಯ್ಬಿಟ್ಟಿಲ್ಲ.

ಈಚೆಗೆ ಈ ರಿಲೇಷನ್‌ಶಿಫ್‌ ಬಗ್ಗೆ ಕೇಳಿದಾಗ ಪರಿಣಿತಿ ‘ನನ್ನ ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಸತ್ಯ ಏನೆಂದು ಗೊತ್ತು. ನಾನೇನೂ ಸ್ಪಷ್ಟನೆ ನೀಡಬೇಕಾಗಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ನಾನು ಈ ಸುದ್ದಿಯನ್ನು ನಿರಾಕರಿಸುವುದೂ ಇಲ್ಲ, ಸ್ವೀಕರಿಸುವುದು ಇಲ್ಲ. ಮಾಧ್ಯಮಗಳು ಈ ಕುರಿತು ನಾನು ಘೋಷಿಸಲಿ ಎಂದು ಕಾಯುತ್ತಿವೆ. ಆದರೆ ಇದು ನನ್ನ ವೈಯಕ್ತಿಕ ಜೀವನ’ ಎಂದು ಉತ್ತರಿಸಿದ್ದಾರೆ.

ಕಳೆದ ವರ್ಷ ಪ್ರಿಯಾಂಕಾ ಚೋಪ್ರಾ ಮದುವೆ ಸಮಾರಂಭದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.