ADVERTISEMENT

‘ಪ್ಯಾರಿಸ್‌ ಪ್ಯಾರಿಸ್‌’ ಬಿಡುಗಡೆಗೆ ಸೆನ್ಸಾರ್‌ ಬೋರ್ಡ್‌ ಅಡ್ಡಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:30 IST
Last Updated 7 ಆಗಸ್ಟ್ 2019, 19:30 IST
.
.   

ಕಾಜಲ್‌ ಅಗರವಾಲ್‌ ಅಭಿನಯದ ‘ಪ್ಯಾರಿಸ್‌ ಪ್ಯಾರಿಸ್‌’ ಚಿತ್ರದಲ್ಲಿನ ಕೆಲವು ಬೋಲ್ಡ್‌ ದೃಶ್ಯಗಳಿಂದಾಗಿ ಸೆನ್ಸಾರ್‌ ಬೋರ್ಡ್‌ನಿಂದ ಪ್ರಮಾಣಪತ್ರ ಪಡೆಯಲುತೊಡಕುಂಟಾಗಿದೆ. ಹಿಂದಿಯ ‘ಕ್ವೀನ್‌’ ಚಿತ್ರದ ತಮಿಳು ರಿಮೇಕ್‌ ‘ಪ್ಯಾರಿಸ್‌ ಪ್ಯಾರಿಸ್‌’.

ಮಲಯಾಳಂ ಭಾಷೆಯಲ್ಲಿ ‘ಝಾಂ ಝಾಂ’ ಹಾಗೂ ಕನ್ನಡದಲ್ಲಿ ‘ಬಟರ್‌ಫ್ಲೈ’, ತೆಲುಗಿನಲ್ಲಿ ‘ಮಹಾಲಕ್ಷ್ಮಿ’ ಎಂದು ನಿರ್ಮಾಣವಾಗುತ್ತಿದೆ.
ಈ ಚಿತ್ರಗಳಿಗೆ ಸೆನ್ಸಾರ್‌ ಬೋರ್ಡ್‌ನಿಂದ ಪ್ರಮಾಣಪತ್ರ ಪಡೆಯಲು ಯಾವುದೇ ಸಮಸ್ಯೆಯಾಗಿಲ್ಲ.

‘ಪ್ಯಾರಿಸ್‌ ಪ್ಯಾರಿಸ್‌’ ಚಿತ್ರದಲ್ಲಿ ಕೆಲವು ಬೋಲ್ಡ್‌ ದೃಶ್ಯ ಹಾಗೂ ಅಶ್ಲೀಲ ಪದಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೇಬೋಲ್ಡ್‌ ದೃಶ್ಯಗಳನ್ನು ಬ್ಲರ್‌ ಮಾಡಿ, ಅಶ್ಲೀಲ ಪದಗಳನ್ನು ಮ್ಯೂಟ್‌ ಮಾಡುವಂತೆ ತಿಳಿಸಿದ್ದಾರಂತೆ.

ADVERTISEMENT

ಸೆನ್ಸಾರ್‌ ಬೋರ್ಡ್‌ನ ಈ ನಿರ್ಧಾರವನ್ನು ಚಿತ್ರದ ನಿರ್ಮಾಪಕರು ಪರಿಷ್ಕರಣಾ ಸಮಿತಿಗೆ ಕೊಂಡೊಯ್ಯಲಿದ್ದಾರೆ.ಆ ಪದಗಳು ಹಾಗೂ ದೃಶ್ಯಗಳು ಸಿನಿಮಾಕ್ಕೆ ಮುಖ್ಯ ಎಂದು ಹೇಳಿರುವ ನಿರ್ದೇಶಕ ರಮೇಶ್‌ ಅರವಿಂದ್‌, ಪರಿಷ್ಕರಣಾ ಸಮಿತಿಗೆ ಹೋಗುವ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ನಿರ್ಮಾಪಕ ಮನು ಕುಮಾರನ್‌ ಅವರು ಹಿಂದಿಯ ‘ಕ್ವೀನ್‌’ ಸಿನಿಮಾವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಿಗೆ ರಿಮೇಕ್‌ ಮಾಡುವ ಹಕ್ಕನ್ನು ಪಡೆದುಕೊಂಡಿದ್ದಾರೆ.

ಮಹಿಳಾ ಕೇಂದ್ರಿತ ಸಿನಿಮಾ ‘ಕ್ವೀನ್‌’. ಮೂಲ ಚಿತ್ರದಲ್ಲಿ ಕಂಗನಾ ರನೋಟ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರಿಮೇಕ್‌ ಚಿತ್ರಗಳಲ್ಲಿ ತಮನ್ನಾ ಭಾಟಿಯಾ, ಪಾರುಲ್‌ ಯಾದವ್‌, ಕಾಜಲ್‌ ಅಗರವಾಲ್‌, ಮಂಜಿಮಾ ಮೋಹನ್‌ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.