ADVERTISEMENT

ಬಹುಭಾಷಾ ನಟಿ ನಯನತಾರಾ ನಟನೆಯ ‘ಪ್ಯಾಟ್ರಿಯಟ್’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ

ಪಿಟಿಐ
Published 25 ಜನವರಿ 2026, 10:53 IST
Last Updated 25 ಜನವರಿ 2026, 10:53 IST
   

ಬಹುಭಾಷಾ ನಟಿ, ಲೇಡಿ ಸೂಪರ್‌ ಸ್ಟಾರ್‌ ಖ್ಯಾತಿಯ ನಯನತಾರಾ ನಟನೆಯ ಮುಂಬರುವ ಮಲಯಾಳಂ ಚಿತ್ರ ‘ಪ್ಯಾಟ್ರಿಯಟ್’ನ ಫಸ್ಟ್‌ಲುಕ್ ಬಿಡುಗಡೆ ಮಾಡಲಾಗಿದೆ.

ಮಹೇಶ್ ನಾರಾಯಣ್ ಅವರು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ನಟಿಸಿದ್ದಾರೆ. 2016ರಲ್ಲಿ ನಯನತಾರಾ ಅವರು ನಟ ಮಮ್ಮುಟ್ಟಿ ಅವರೊಂದಿಗೆ ‘ಪುತಿಯಾ ನಿಯಮಮ್’ ಎಂಬ ಸಿನಿಮಾದಲ್ಲಿ ಕೊನೆಯ ಬಾರಿ ನಟಿಸಿದ್ದರು. ಈಗ ಪುನಃ ‘ಪ್ಯಾಟ್ರಿಯಟ್ ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ.

ಸಿನಿಮಾದ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಸಿನಿಮಾದ ಫಸ್ಟ್‌ಲುಕ್‌ ಹಂಚಿಕೊಂಡಿರುವ ನಯನತಾರಾ ‘ಮಹೇಶ್ ನಾರಾಯಣ್ ಸಿನಿಮಾ’ ಎಂಬ ಅಡಿಬರಹ ನೀಡಿದ್ದಾರೆ.

ADVERTISEMENT

ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಅವರು ಜೊತೆಯಾಗಿ ‘ಕಡಲ್ ಕಾಡನ್ನೋರು ಮಾತುಕುಟ್ಟಿ’ ಚಿತ್ರದಲ್ಲಿ ಕೆಲಸ ಮಾಡಿದ್ದರು. ಸದ್ಯ ‘ಪ್ಯಾಟ್ರಿಯಟ್’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಮತ್ತು ಕುಂಚಾಕೊ ಬೋಬನ್  ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

2025ರಲ್ಲಿ ಎಸ್. ಶಶಿಕಾಂತ್ ನಿರ್ದೇಶನದ, ನಯನತಾರಾ, ಆರ್ ಮಾಧವನ್ ಹಾಗೂ ಸಿದ್ಧಾರ್ಥ್ ನಟನೆಯ ‘ಟೆಸ್ಟ್’ ಸಿನಿಮಾ ಬಿಡುಗಡೆಯಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.