ADVERTISEMENT

ಸ್ವಾತಂತ್ರ್ಯ ಕುರಿತು ಮೈನವಿರೇಳಿಸುವ ದೇಶಭಕ್ತಿಯ ಸಿನಿಮಾಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2025, 6:31 IST
Last Updated 15 ಆಗಸ್ಟ್ 2025, 6:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದಿವೆ. ದೇಶಕ್ಕಾಗಿ ಪ್ರಾಣತೆತ್ತ, ಶತ್ರುಗಳ ವಿರುದ್ಧ ಹೋರಾಡಿದವರು ಅದೆಷ್ಟೊ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಸಮಯದಲ್ಲಿ ನಡೆದ ಸನ್ನಿವೇಶಗಳು, ವೀರ ಮರಣ ಹೊಂದಿದೆ ವ್ಯಕ್ತಿಗಳ ಜೀವನಗಾಥೆ ಸಿನಿಮಾಗಳಾಗಿ ಮೂಡಿಬಂದಿವೆ. ಅವುಗಳಲ್ಲಿ ಆಯ್ದ ಸಿನಿಮಾಗಳ ಪಟ್ಟಿ ಇಲ್ಲಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ADVERTISEMENT

2012ರಲ್ಲಿ ನಟ ದರ್ಶನ್‌ ಅಭಿನಯಿಸಿದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಕತೆಯನ್ನು ಒಳಗೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 

ಮುತ್ತಿನ ಹಾರ

ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ, ವಿಷ್ಣುವರ್ಧನ್‌ ಅಭಿನಯದ ‘ಮುತ್ತಿನ ಹಾರ’ ಚಿತ್ರವು ವೀರ ಯೋಧ ಅಚ್ಚಪ್ಪ ಅವರ ಕತೆಯನ್ನು ಒಳಗೊಂಡಿದೆ. ಅಚ್ಚಪ್ಪ ದೇಶಕ್ಕಾಗಿ ಜೀವತೆತ್ತ ವೀರಯೋಧ. ಈ ಸಿನಿಮಾ 1990–91ರಲ್ಲಿ  ಅತ್ಯುತ್ತಮ ಸಿನಿಮಾ ಎನ್ನುವ ಪ್ರಶಸ್ತಿಯನ್ನು ಗೆದ್ದಿದೆ. 

ವೀರ ಸಿಂಧೂರ ಲಕ್ಷ್ಮಣ

1977ರಲ್ಲಿ ಹುಣಸೂರು ಕೃಷ್ಣ ಮೂರ್ತಿ ಅವರು ನಿರ್ದೇಶಿಸಿರುವ ‘ವೀರ ಸಿಂಧೂರ ಲಕ್ಷ್ಮಣ’ ಚಿತ್ರವು ಕನ್ನಡದ ಮೊದಲ ದೇಶಭಕ್ತಿ ಸಿನಿಮಾವಾಗಿದೆ. ಸಿಂಧೂರ ಲಕ್ಷ್ಮಣ ಎನ್ನುವ ವೀರ ಯೋಧನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಈ ಚಿತ್ರದಲ್ಲಿ ಕೆ.ಎಸ್‌ ಅಶ್ವತ್‌, ಸುಧೀರ್, ವಜ್ರಮುನಿ ಸೇರಿ ಹಲವರು ನಟಿಸಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ

ಬಿ.ಆರ್‌.ಪಂಥುಲು 1961ರಲ್ಲಿ ನಿರ್ದೇಶಿಸಿರುವ ‘ಕಿತ್ತೂರು ರಾಣಿ ಚೆನ್ನಮ್ಮ’ ಚಿತ್ರವು ಬ್ರಿಟಿಷ್‌ ನೀತಿಯ ವಿರುದ್ಧ ಹೋರಾಡಿದ ಮಹಿಳಾ ಮಣಿ ಕಿತ್ತೂರು ರಾಣಿ ಚೆನ್ನಮ್ಮನ ಸಾಹಸಗಾಥೆಯನ್ನು ಒಳಗೊಂಡಿದೆ. ಸರೋಜಾದೇವಿ, ಡಾ. ರಾಜ್‌ಕುಮಾರ್‌, ನರಸಿಂಹರಾಜು ಸೇರಿದಂತೆ ಹಲವರು ನಟಿಸಿದ್ದರು.

ಮದರ್‌ ಇಂಡಿಯಾ

ಮೆಹಬೂಬ್ ಖಾನ್ ಅವರ ನಿರ್ದೇಶನದ ಹಿಂದಿಯ 'ಮದರ್ ಇಂಡಿಯಾ' ಚಿತ್ರವು ಹೊಸದಾಗಿ ಸ್ವತಂತ್ರಗೊಂಡ ರಾಷ್ಟ್ರದ ಕಥೆಯನ್ನು ಹೇಳುತ್ತದೆ. ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾ ಒಂದು ಹೆಗ್ಗುರುತಾಗಿ ಉಳಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.