ADVERTISEMENT

ಪವನ್‌- ಪ್ರಣೀತಾ ಜೋಡಿ ‘ವಿರೂಪಾಕ್ಷʼದಲ್ಲಿ?

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 8:47 IST
Last Updated 3 ನವೆಂಬರ್ 2020, 8:47 IST
ಪವನ್‌ ಕಲ್ಯಾಣ್‌
ಪವನ್‌ ಕಲ್ಯಾಣ್‌   

ಪ್ರಣೀತಾ ಸುಭಾಷ್‌ ಮತ್ತು ತೆಲುಗಿನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಶೀಘ್ರವೇ ಹೊಸ ಚಿತ್ರದಲ್ಲಿ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ವಿರೂಪಾಕ್ಷʼ ಹೆಸರಿನ ಚಿತ್ರ ಎಂದು ಹೇಳಲಾಗುತ್ತಿದ್ದರೂ ಶೀರ್ಷಿಕೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.

ಅಂದಹಾಗೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವವವರು ಕ್ರಿಷ್‌. ಕ್ರಿಷ್‌ ಅವರು ಕಾಂಚಿ ಮತ್ತು ಗೌತಮಿ ಪುತ್ರ ಶಾತಕರ್ಣಿ ಚಿತ್ರಗಳ ಮೂಲಕ ಹೆಸರು ಮಾಡಿದ ನಿರ್ದೇಶಕ. ಚಿತ್ರವನ್ನು ಎ.ಎಂ. ರತ್ನ ನಿರ್ಮಿಸುತ್ತಿದ್ದಾರೆ.

ಹೊಸ ಚಿತ್ರವು ಪ್ರೀತಿಯಕಥಾವಸ್ತು ಹೊಂದಿದೆ.ಪವನ್‌ ಕಲ್ಯಾಣ್‌ ಮತ್ತು ಪ್ರಣೀತಾ ಇದರಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕುತೂಹಲ ಅಭಿಮಾನಿಗಳದ್ದು.

ADVERTISEMENT

ಈ ಹಿಂದೆ ಪವನ್‌- ಪ್ರಣೀತಾ ಜೋಡಿ ‘ಅತ್ತಾರೆಂಟಿಕಿ ದಾರೇದಿ’ ಎಂಬ ಸೂಪರ್‌ ಹಿಟ್‌ ಚಿತ್ರದಲ್ಲಿ ಅಭಿನಯಿಸಿ ಅಭಿಮಾನಿಗಳ ಮನಗೆದ್ದಿದ್ದರು.

ಹೊಸ ಕಥೆ ಸ್ವಾತಂತ್ರ್ಯ ಪೂರ್ವದ ಘಟನಾವಳಿಗಳನ್ನು ಒಳಗೊಂಡ ಕಥಾವಸ್ತು ಹೊಂದಿದೆ. ಸದ್ಯ ಪವನ್‌ ಅವರು ‘ಕೋರ್ಟ್‌ ರೂಂ ಡ್ರಾಮಾ ವಕೀಲ್‌ ಸಾಬ್‌’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.