ನಟ ಪವನ್ ಕಲ್ಯಾಣ್, ಓಜಿ ನಿರ್ದೇಶಕ ಸುಜೀತ್
ಚಿತ್ರ: ಎಕ್ಸ್ ಖಾತೆ
ತೆಲುಗು ನಟ ಪವನ್ ಕಲ್ಯಾಣ್ ಅವರು ‘ಓಜಿ’ ಸಿನಿಮಾ ನಿರ್ದೇಶಕನಿಗೆ ದುಬಾರಿ ಬೆಲೆಯ ಉಡುಗೊರೆಯನ್ನು ನೀಡಿದ್ದಾರೆ. ಓಜಿ ನಿರ್ದೇಶಕ ಸುಜೀತ್ ಅವರ ಹುಟ್ಟುಹಬ್ಬದ ನಿಮಿತ್ತ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಕಾರನ್ನು ನಟ ಪವನ್ ಕಲ್ಯಾಣ್ ಉಡುಗೊರೆಯಾಗಿ ನೀಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಹುಟ್ಟುಹಬ್ಬಕ್ಕೆ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ಪಡೆದ ಬಗ್ಗೆ ಓಜಿ ನಿರ್ದೇಶಕ ಸುಜೀತ್ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಫೋಟೊಗಳ ಜೊತೆಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ನಟ ಪವನ್ ಕಲ್ಯಾಣ್, ಓಜಿ ನಿರ್ದೇಶಕ ಸುಜೀತ್
ಓಜಿ ನಿರ್ದೇಶಕ ಸುಜೀತ್ ಹೇಳಿದ್ದೇನು?
‘ಇದು ಪದಗಳಲ್ಲಿ ಹೇಳಲಾಗದಷ್ಟು ಅತ್ಯುತ್ತಮ ಉಡುಗೊರೆ. ನನ್ನ ನೆಚ್ಚಿನ ಓಜಿ ಕಲ್ಯಾಣ್ ಅವರ ಪ್ರೀತಿ ಮತ್ತು ಪ್ರೋತ್ಸಾಹ ನನಗೆ ತುಂಬಾ ಅಮೂಲ್ಯವಾದುದು. ನಾನು ಬಾಲ್ಯದಿಂದಲೂ ಅವರ ದೊಡ್ಡ ಅಭಿಮಾನಿ. ಹೀಗಾಗಿ ಈ ವಿಶೇಷ ಉಡುಗೊರೆಯನ್ನು ನೀಡಿದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಜೊತೆಗೆ ಕೊನೆಯವರೆಗೂ ಋಣಿಯಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಇನ್ನು, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ನಟಿಸಿರುವ ಓಜಿ ಸಿನಿಮಾ ಸೆಪ್ಟೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಭಾರೀ ನಿರೀಕ್ಷೆಗಳ ನಡುವೆ ಓಜಿ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರವು ವಿಶ್ವಾದ್ಯಂತ ₹300 ಕೋಟಿ ಗಳಿಸಿ ಸಂಚಲನ ಸೃಷ್ಟಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.