ADVERTISEMENT

ಪ್ರಜ್ವಲ್‌ ದೇವರಾಜ್‌ ಅಭಿನಯದ ಪಿಡಿ–35 ಫಸ್ಟ್‌ಲುಕ್‌ ಜುಲೈ 4ರಂದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 9:17 IST
Last Updated 30 ಜೂನ್ 2021, 9:17 IST
ಶೀರ್ಷಿಕೆ ಬಿಡುಗಡೆಯ ಪೋಸ್ಟರ್‌
ಶೀರ್ಷಿಕೆ ಬಿಡುಗಡೆಯ ಪೋಸ್ಟರ್‌   

ಪ್ರಜ್ವಲ್‌ ದೇವರಾಜ್‌ ಅಭಿನಯದ ಪಿಡಿ–35 ಚಿತ್ರದ ಫಸ್ಟ್‌ಲುಕ್‌ ಹಾಗೂ ಶೀರ್ಷಿಕೆ ಬಿಡುಗಡೆ ಜುಲೈ 4ರಂದು ನಡೆಯಲಿದೆ. ಅಂದಹಾಗೆ ಅಂದು ಪ್ರಜ್ವಲ್‌ ಅವರ ಹುಟ್ಟುಹಬ್ಬವೂ ಹೌದು.

ಪಿ.ಡಿ. –35 ಅಂದರೆ ಪ್ರಜ್ವಲ್‌ ದೇವರಾಜ್‌–35 ಎಂದು ಅರ್ಥ. ಇದು ಅವರ ಅಭಿನಯದ 35ನೇ ಚಿತ್ರವೂ ಹೌದು. ಈ ಚಿತ್ರ ಅವರ ಹುಟ್ಟುಹಬ್ಬದ ಉಡುಗೊರೆ ಎಂದೂ ಚಿತ್ರತಂಡ ಹೇಳಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಅವರು ನಿರ್ಮಿಸುತ್ತಿರುವ ಈ‌ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ‌.

ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ‌ ಪ್ರಭುದೇವ ನಟಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.