ADVERTISEMENT

PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 5:59 IST
Last Updated 22 ನವೆಂಬರ್ 2025, 5:59 IST
<div class="paragraphs"><p>ಕಾಕ್ರೋಚ್ ಸುಧಿ ದಂಪತಿ, ದುನಿಯಾ ವಿಜಯ್</p></div>

ಕಾಕ್ರೋಚ್ ಸುಧಿ ದಂಪತಿ, ದುನಿಯಾ ವಿಜಯ್

   

ಚಿತ್ರ: ಇನ್‌ಸ್ಟಾಗ್ರಾಮ್

ಕಾಕ್ರೋಚ್ ಸುಧಿ ಎಂದೇ ಖ್ಯಾತಿ ಪಡೆದಿರುವ ಸುಧೀರ್ ಬಾಲರಾಜ್ ದಂಪತಿ ನಟ ದುನಿಯಾ ವಿಜಯ್‌ ಅವರನ್ನು ಭೇಟಿಯಾಗಿದ್ದಾರೆ.

ADVERTISEMENT

ಕಳೆದ ವಾರ ಬಿಗ್‌ಬಾಸ್ ಸೀಸನ್ 12ರಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದ ಕಾಕ್ರೋಚ್ ಸುಧಿ ‌ಈಗ ‘ಸಿಟಿ ಲೈಟ್ಸ್’ ಸಿನಿಮಾದ ಚಿತ್ರೀಕರಣ ಸೆಟ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ.

ನಟ ಸುಧೀರ್ ಬಾಲರಾಜ್ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಖಡಕ್ ಡೈಲಾಗ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಅಷ್ಟೇ ಅಲ್ಲದೇ ದುನಿಯಾ ವಿಜಯ್‌ ಅವರ ಜೊತೆಗೆ ಸಲಗ, ಭೀಮ ಸಿನಿಮಾದಲ್ಲಿ ನಟ ಕಾಕ್ರೋಚ್ ಸುಧಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.

ಈಗ ನಟ ಕಾಕ್ರೋಚ್ ಸುಧಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟ ದುನಿಯಾ ವಿಜಯ್, ವಿನಯ್ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಪುತ್ರಿ ಜೊತೆಗೆ ಸುಧಿ ದಂಪತಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಪೋಸ್ಟ್ ಜೊತೆಗೆ ‘ಸಿಟಿ ಲೈಟ್ಸ್ ಚಿತ್ರೀಕರಣದ ಸಮಯದಲ್ಲಿ ವಿಜಿ ಅಣ್ಣ ಹಾಗೂ ವಿನಯ್ ರಾಜಕುಮಾರ್ ಅವರ ಜೊತೆ ಕಳೆದ ಕ್ಷಣ’ ಎಂದು ಸುಧೀರ್ ಬಾಲರಾಜ್ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.