ADVERTISEMENT

PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್ ಪುತ್ರ ರಾಯನ್‌: ತಾರೆಯರ ಸಮಾಗಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2025, 10:53 IST
Last Updated 25 ನವೆಂಬರ್ 2025, 10:53 IST
<div class="paragraphs"><p>ಮೇಘನಾ ರಾಜ್, ರಾಯನ್‌ ರಾಜ್‌ ಸರ್ಜಾ </p></div>

ಮೇಘನಾ ರಾಜ್, ರಾಯನ್‌ ರಾಜ್‌ ಸರ್ಜಾ

   

ಚಿತ್ರ: ಇನ್‌ಸ್ಟಾಗ್ರಾಮ್

ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಪುತ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ.

ADVERTISEMENT

ಮಗನ 5ನೇ ವರ್ಷದ ಹುಟ್ಟುಹಬ್ಬವನ್ನು ನಟಿ ಮೇಘನಾ ರಾಜ್‌ ಅವರು ಅದ್ಧೂರಿಯಾಗಿ ಆಚರಿಸಿದ್ದಾರೆ.

ವಿಶೇಷ ಎಂದರೆ ಸ್ಪೈಡರ್‌ಮ್ಯಾನ್‌ ಥೀಮ್‌ನಲ್ಲಿ ರಾಯನ್‌ ರಾಜ್‌ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

ರಾಯನ್‌ ಹುಟ್ಟುಹಬ್ಬಕ್ಕೆ ಮೇಘನಾ ರಾಜ್‌ ತಂದೆ-ತಾಯಿ, ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ದಂಪತಿ, ಹಿರಿಯ ನಟಿ ಶ್ರುತಿ ಹಾಗೂ ಮಗಳು ಗೌರಿ ಹಾಜರಿದ್ದರು.

ಅಷ್ಟೇ ಅಲ್ಲದೇ ನಟಿ ಜಯಮಾಲಾ, ಮಾಳವಿಕಾ ಅವಿನಾಶ್‌, ಅನಿರುದ್ಧ ಜಟ್ಕರ್‌ ಕುಟುಂಬವೂ ರಾಯನ್‌ ಹುಟ್ಟುಹಬ್ಬದಂದು ಭಾಗಿಯಾಗಿದ್ದರು.

ಮಗನ ಹುಟ್ಟು ಹಬ್ಬದ ವಿಡಿಯೊವನ್ನು ನಟಿ ಮೇಘನಾ ರಾಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅದರ ಜೊತೆಗೆ ‘5ನೇ ವರ್ಷಕ್ಕೆ ಕಾಲಿಡುತ್ತಿರುವ ರಾಯನ್ ರಾಜ್ ಸರ್ಜಾಗೆ ಹುಟ್ಟು ಹಬ್ಬದ ಶುಭಾಶಯಗಳು. ಹುಟ್ಟುಹಬ್ಬಕ್ಕೆ ಬಂದಿದ್ದ ಎಲ್ಲರಿಗೂ ಧನ್ಯವಾದಗಳು. ಈ ವಿಡಿಯೊವನ್ನು ಸ್ವಲ್ಪ ತಡವಾಗಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ರಾಯನ್‌ ರಾಜ್‌ ಹುಟ್ಟುಹಬ್ಬದಂದು ಹಿರಿಯ ನಟಿ ಗಿರಿಜಾ ಲೋಕೇಶ್ ಭಾಗಿಯಾಗಿ ಖುಷಿಪಟ್ಟಿದ್ದಾರೆ.

ಅನಿರುದ್ಧ ಜಟ್ಕರ್ ದಂಪತಿ ಕೂಡ ರಾಯನ್‌ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.