ADVERTISEMENT

ವೈರಲ್‌ ಫೋಟೊ: ರಾಮಾಯಣ ಸೀತೆ, ಆಡ್ವಾಣಿ ಮತ್ತು ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 7:45 IST
Last Updated 15 ಏಪ್ರಿಲ್ 2020, 7:45 IST
   

ಮುಂಬೈ: ಲಾಕ್‌ಡೌನ್‌ ಪರಿಣಾಮ ಮತ್ತೆ ಮನೆಗಳಲ್ಲಿ ದೂರದರ್ಶನದ ರಾಮಾಯಣ ಧಾರವಾಹಿ ದಾಂಗುಡಿ ಇಟ್ಟಿದೆ. ಆ ಮೂಲಕ ರಾಮಯಾಣದ ಪಾತ್ರದಾರಿಗಳು ಕೂಡ ಮುನ್ನೆಲೆಗೆ ಬಂದಿದ್ದಾರೆ.

ರಾಮಾಯಣ ಧಾರವಾಹಿಯ ಸೀತಾ ಪಾತ್ರಧಾರಿ ದೀಪಿಕಾ ಚಿಖ್ಲಿಯಾ ಟೋಪಿವಾಲ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಿರಿಯ ಮುಖಂಡ, ಉಕ್ಕಿನ ಮನುಷ್ಯ ಖ್ಯಾತಿಯ ಎಲ್‌. ಕೆ. ಆಡ್ವಾಣಿ ಅವರೊಂದಿಗೆ ಇರುವ ಕಪ್ಪು ಬಿಳುಪಿನ ಫೋಟೊವನ್ನು ಹಂಚಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ಫೋಟೊವನ್ನು ಶೇರ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 4 ಸಾವಿರ ಜನರು ರೀಟ್ವೀಟ್‌ ಮಾಡಿದ್ದು 24 ಸಾವಿರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ.

ADVERTISEMENT

ಫೋಟೊವನ್ನು ಹಂಚಿಕೊಂಡಿರುವ ದೀಪಿಕಾ, ಇದು ಗುಜರಾತ್‌ನ ವಡೋದರ ( ಹಿಂದಿನ ಬರೋಡಾ) ಕ್ಷೇತ್ರದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದಾಗ ಮತ ಪ್ರಚಾರ ಸಂದರ್ಭದಲ್ಲಿ ತಗೆದ ಚಿತ್ರ ಎಂದು ಬರೆದುಕೊಂಡಿದ್ದಾರೆ.

ಈ ಹಳೆಯ ಫೋಟೊದಲ್ಲಿ ದೀಪಿಕಾ ಸೇರಿದಂತೆ ಆಡ್ವಾಣಿ, ಮೋದಿ ಹಾಗೂ ಅಂದಿನ ಗುಜರಾತ್‌ ಚುನಾವಣೆ ಉಸ್ತುವಾರಿ ನಳಿನ ಭಟ್‌ ಅವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.