ADVERTISEMENT

ವಿಡಿಯೊ ನೋಡಿ: ಚಿತ್ರೀಕರಣದ ವೇಳೆ ಪಾಪ್‌ ಗಾಯಕಿಗೆ ಕಚ್ಚಿದ ಹಾವು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 8:25 IST
Last Updated 27 ಡಿಸೆಂಬರ್ 2021, 8:25 IST
ಮೇಟಾ
ಮೇಟಾ   

ಹಾಲಿವುಡ್‌ ಪಾಪ್‌ ಗಾಯಕಿ ಹಾಗೂ ನಟಿ ಮೇಟಾ ಅವರಿಗೆ ವಿಡಿಯೊ ಸಾಂಗ್‌ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದೆ.

ಈ ಬಗ್ಗೆ ಮೇಟಾ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಹಾವುಗಳನ್ನು ಮೈಮೇಲೆ ಹಾಕಿಕೊಂಡು ಮೇಟಾ ಹಾಡುತ್ತಿರುವುದನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಇದೇ ಸಮಯದಲ್ಲಿಹಾವೊಂದು ಮೇಟಾ ಗಲ್ಲಕ್ಕೆಕಚ್ಚಿದೆ. ಕೂಡಲೇ ಚಿತ್ರೀಕರಣ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ADVERTISEMENT

ಒಂದು ವಾರ ತಡವಾಗಿ ಹಾವು ಕಚ್ಚಿರುವ ಪೋಸ್ಟ್‌ ಹಾಕಿಕೊಂಡಿದ್ದಾರೆ.ಜೊತೆಗೆ ವಿಡಿಯೊವನ್ನು ಶೇರ್‌ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.