ADVERTISEMENT

ಸೂರಿ ಅಂಗಡಿಯಲ್ಲಿ ತಯಾರಾದ ಪಾಪ್‌ಕಾರ್ನ್‌ ಮಂಕಿ ಟೈಗರ್ ಸಿನಿಮಾ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 7:31 IST
Last Updated 7 ಜನವರಿ 2020, 7:31 IST
ಡಾಲಿ ಧನಂಜಯ್
ಡಾಲಿ ಧನಂಜಯ್   

ಬೆಂಗಳೂರು: ನಿರ್ದೇಶಕಸೂರಿ ಅಂಗಡಿಯಲ್ಲಿ ತಯಾರಾಗಿರುವ ‘ಪಾಪ್‌ಕಾರ್ನ್‌ ಮಂಕಿ ಟೈಗರ್‘ ಸಿನಿಮಾದ ಟೀಸರ್‌ ಮಂಗಳವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಸೂರಿ ಸಿನಿಮಾದ ಟೈಟಲ್‌ಗಳುಮೇಲ್ನೋಟಕ್ಕೆ ಅಸಂಬದ್ಧವಾಗಿ ಕಂಡರೂ ಕಥೆಯನ್ನು ಕಲಾತ್ಮಕವಾಗಿ ಹೆಣೆದು ಸುಸಂಬದ್ಧಗೊಳಿಸುವುದೇ ಸೂರಿ ಸ್ಟೈಲ್‌. ಟಗರು ಬಳಿಕ ಸೂರಿ ಮತ್ತೊಂದು ಹಿಟ್‌ ಸಿನಿಮಾ ನೀಡಲು ಬರುತ್ತಿದ್ದಾರೆ.

ಮಾಫಿಯಾದ ಹಿನ್ನೆಲೆ ಮತ್ತು ಮನುಷ್ಯನ ಸಂಬಂಧ ಕುರಿತು ಚಿತ್ರ ಮಾತನಾಡುತ್ತದೆ. ಈ ಚಿತ್ರದ ಟೀಸರ್‌ ನೋಡಿದಾಗ ಇದೊಂದು ರೌಡಿಸಂ ಕಥೆ ಎಂದೇ ಕಂಡು ಬಂದರೂ ಮಾನವೀಯ ಸಂಬಂಧಗಳ ಕುರಿತ ಸೂರಿ ಭಿನ್ನವಾಗಿ ಏನೋ ಹೇಳಲು ಹೊರಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ಮಹಾನಗರ, ಸಮುದ್ರ, ನಲ್ಲಿ ನೀರು, ನೆತ್ತರು, ಚಿಟ್ಟೆ, ಮಗುವಿನ ದೃಶ್ಯಗಳು ಟೀಸರ್‌ನಲ್ಲಿ ಬಂದು ಹೋಗುತ್ತವೆ.

ADVERTISEMENT

ಪಾಪ್‌ಕಾರ್ನ್‌ ಮಂಕಿ ಟೈಗರ್ ಸಿನಿಮಾದಲ್ಲಿ ಡಾಲಿ ಖ್ಯಾತಿಯ ಧನಂಜಯ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಡಾಲಿಗೆ ಜೋಡಿಯಾಗಿ ನಿವೇದಿತಾ ಬಣ್ಣ ಹಚ್ಚಿದ್ದಾರೆ. ಚರಣ್‌ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.