ADVERTISEMENT

ಪ್ರಭಾಸ್‌ ನಟನೆಯ ‘ದಿ ರಾಜಾಸಾಬ್‌’ ಚಿತ್ರದ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
<div class="paragraphs"><p>‘ದಿ ರಾಜಾಸಾಬ್‌’ ಸಿನಿಮಾದ ಪೋಸ್ಟರ್</p></div>

‘ದಿ ರಾಜಾಸಾಬ್‌’ ಸಿನಿಮಾದ ಪೋಸ್ಟರ್

   

ತೆಲುಗಿನ ಖ್ಯಾತ ನಟ ಪ್ರಭಾಸ್‌ ನಟನೆಯ ‘ದಿ ರಾಜಾಸಾಬ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಮಾರುತಿ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಪೀಪಲ್‌ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡಿದೆ. 

ಹಾರರ್-ಫ್ಯಾಂಟಸಿ ಡ್ರಾಮಾ ಸಿನಿಮಾ ಕಳೆದ ಜೂನ್‌ನಲ್ಲಿ ಟೀಸರ್‌ ಮೂಲಕವೇ ಗಮನಸೆಳೆದಿತ್ತು. ಟ್ರೇಲರ್‌ನಲ್ಲಿ ಹಲವು ಶೇಡ್‌ಗಳಲ್ಲಿ ಪ್ರಭಾಸ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಡಿಸೆಂಬರ್‌ 5 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಟಿ.ಜಿ.ವಿಶ್ವಪ್ರಸಾದ್ ಬಂಡವಾಳ ಹೂಡಿರುವ ಈ ಸಿನಿಮಾ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿದ್ಧವಾಗಿದೆ. ತಮನ್ ಎಸ್. ಸಂಗೀತ ಮತ್ತು ಮೈನವಿರೇಳಿಸುವ ದೃಶ್ಯಗಳು ಈ ಸಿನಿಮಾದ ಹೈಲೈಟ್ಸ್‌. ಆ್ಯಕ್ಷನ್‌ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಪ್ರಭಾಸ್‌ ಈ ಸಿನಿಮಾದಲ್ಲಿ ಹಾಸ್ಯದೌತಣ ಬಡಿಸುವ ನಿರೀಕ್ಷೆಯಿದೆ. ಸಂಜಯ್ ದತ್, ಜರೀನಾ ವಹಾಬ್, ಬೊಮನ್ ಇರಾನಿ, ನಿಧಿ ಅಗರವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಚಿತ್ರದ ತಾರಾಬಳಗದಲ್ಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.