ADVERTISEMENT

PV Cine Samman-3: ಪ್ರತಿಭಾವಂತ ನಟನಿಗೆ ಸಂದ ಗೌರವ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:37 IST
Last Updated 3 ಜುಲೈ 2025, 23:37 IST
<div class="paragraphs"><p>ಗೋಪಾಲಕೃಷ್ಣ ದೇಶಪಾಂಡೆ&nbsp;</p></div>

ಗೋಪಾಲಕೃಷ್ಣ ದೇಶಪಾಂಡೆ 

   

ಅತ್ಯುತ್ತಮ ಪೋಷಕ ನಟ

ಗೋಪಾಲಕೃಷ್ಣ ದೇಶಪಾಂಡೆ,

ADVERTISEMENT

ಚಿತ್ರ: ಶಾಖಾಹಾರಿ

ಗೋಪಾಲಕೃಷ್ಣ ದೇಶಪಾಂಡೆ ‘ಶಾಖಾಹಾರಿ’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಮುಡಿಗೇರಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋಪಾಲಕೃಷ್ಣ ದೇಶಪಾಂಡೆ, ‘ಪ್ರಜಾವಾಣಿ ಪತ್ರಿಕೆಯನ್ನು ತುಂಬಾ ಚಿಕ್ಕವನಿದ್ದಾಗಿನಿಂದಲೂ ಓದುತ್ತಿದ್ದೇನೆ. ಆಗ ನಮ್ಮ ತಂದೆ ಓದುತ್ತಿದ್ದರು. ಈಗ ನಾನು ಓದುತ್ತಿದ್ದೇನೆ. ನನ್ನ ಮಗನೂ ಓದಲು ಆರಂಭಿಸಿದ್ದಾನೆ. ಪ್ರಜಾವಾಣಿ ನಮ್ಮಲ್ಲಿ ಒಂದು ಪ್ರಜ್ಞೆ ಬೆಳೆಸಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಜಾಗೃತಿ ಮೂಡಿಸಿದೆ. ನನ್ನನ್ನು ಹೆಚ್ಚು ಹೆಚ್ಚು ಜಾಗೃತನನ್ನಾಗಿ ಮಾಡಿದೆ. ಇದೇ ಪತ್ರಿಕೆ ಇಂದು ನನಗೆ ಪ್ರಶಸ್ತಿ ಕೊಟ್ಟು ನನ್ನ ಕೆಲಸದ ಬಗ್ಗೆ ಇನ್ನೂ ಹೆಚ್ಚು ಜಾಗೃತನಾಗಿರಬೇಕು ಎಂಬ ಎಚ್ಚರಿಕೆಯನ್ನೂ ನೀಡಿದೆ’ ಎಂದರು.

ಪ್ರಶಸ್ತಿ ತಂದುಕೊಟ್ಟ ಸಿನಿಮಾದ ಕುರಿತು ಮಾತನಾಡಿ, ‘ಈ ಸಿನಿಮಾದ ಯುವ ತಂಡವು ನನಗೆ ಅವಕಾಶ ಕೊಟ್ಟಿದೆ. ತಂಡದ ಹುಡುಗರಿಗೆಲ್ಲ ಧನ್ಯವಾದ’ ಎನ್ನುತ್ತಾ, ‘ನನ್ನ ಕಾಲದ ತುಂಬಾ ಜನರಿಗೆ ಸ್ಫೂರ್ತಿ ತುಂಬಿರುವ ಇಬ್ಬರು ನಟರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ನಟರಾದ ರಂಗಾಯಣ ರಘು ಹಾಗೂ ಅಚ್ಯುತ್ ಕುಮಾರ್‌ ಅವರಿಗೆ ಪ್ರಶಸ್ತಿ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.