ADVERTISEMENT

PV Cine Sammana-3: ರಂಗಭೂಮಿ ಕಲಾವಿದೆ ಪ್ರಿಯಾಗೆ ಒಲಿದ ಗೌರವ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:32 IST
Last Updated 3 ಜುಲೈ 2025, 23:32 IST
<div class="paragraphs"><p>ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದ&nbsp;ಪ್ರಿಯಾ ಶಠಮರ್ಷಣ</p></div>

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದ ಪ್ರಿಯಾ ಶಠಮರ್ಷಣ

   

–ಪ್ರಜಾವಾಣಿ ಚಿತ್ರ: ರಂಜು ಪಿ.

ಅತ್ಯುತ್ತಮ ಪೋಷಕ ನಟಿ: ಪ್ರಿಯಾ ಶಠಮರ್ಷಣ

ADVERTISEMENT

ಚಿತ್ರ:ಭೀಮ

ರಂಗಭೂಮಿ ಕಲಾವಿದೆ ಪ್ರಿಯಾ ಶಠಮರ್ಷಣ ‘ಭೀಮ’ ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯಕ್ಕಾಗಿ ಈ ಪ್ರಶಸ್ತಿ ಪಡೆದರು.

‘ಕಲಾವಿದೆಯಾಗಿ 16 ವರ್ಷಗಳಾದವು. ನನ್ನ ವೃತ್ತಿ ಬದುಕಿನಲ್ಲಿ ತೆಗೆದುಕೊಳ್ಳುತ್ತಿರುವ ಮೊದಲ ಪ್ರಶಸ್ತಿ. ತುಂಬಾ ವಿಶೇಷವಿದು. ಪ್ರಶಸ್ತಿ ನೀಡಿ ಜವಾಬ್ದಾರಿ ಹೆಚ್ಚಿಸಿದ್ದಕ್ಕೆ ಪ್ರಜಾವಾಣಿಗೆ ಧನ್ಯವಾದಗಳು. ನನ್ನ ಬದುಕಿನಲ್ಲಿ ಆದ ಮ್ಯಾಜಿಕ್‌ಗೆ ಸೂತ್ರಧಾರ ‘ಭೀಮ’ ಚಿತ್ರದ ನಿರ್ದೇಶಕ ದುನಿಯಾ ವಿಜಯ್‌. ಇವತ್ತು ನಾನು ಜೀವನದಲ್ಲಿ ದುಡಿದು ತಿನ್ನುತ್ತಿರುವ ಪ್ರತಿ ತುತ್ತಿನಲ್ಲಿ ವಿಜಯ್‌ ಅವರ ಋಣವಿದೆ. ಇಂಥ ಒಂದು ಪವರ್‌ಫುಲ್‌ ಪಾತ್ರವನ್ನು ರಿಸ್ಕ್‌ ತೆಗೆದುಕೊಂಡು ಹೊಸ ಹುಡುಗಿಗೆ ನೀಡಿದ್ದಕ್ಕೆ ಅವರಿಗೆ ಧನ್ಯವಾದಗಳು. ನಾನು ಚಿಕ್ಕಂದಿನಿಂದ ಪ್ರಜಾವಾಣಿ ಪತ್ರಿಕೆ ಓದುಗಳು’ ಎಂದರು ಪ್ರಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.