ADVERTISEMENT

ಕೇರಳ ಸದ್ಯ, ಗೋಮಾಂಸ, ಹಂದಿಮಾಂಸ; ಇದುವೇ ನಿಜವಾದ ಕೇರಳ ಸ್ಟೋರಿ ಎಂದ ಪ್ರಕಾಶ್ ರಾಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2026, 10:34 IST
Last Updated 23 ಫೆಬ್ರುವರಿ 2026, 10:34 IST
<div class="paragraphs"><p>ಪ್ರಕಾಶ್ ರಾಜ್</p></div>

ಪ್ರಕಾಶ್ ರಾಜ್

   

ಬೆಂಗಳೂರು: 'ಕೇರಳ ಸ್ಟೋರಿ 2' ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಪರ-ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ.

ಚಿತ್ರದ ಟ್ರೇಲರ್‌ನಲ್ಲಿ ಮಹಿಳೆಯೊಬ್ಬರಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಲು ಯತ್ನಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಈ ಕುರಿತು ನಟ ಪ್ರಕಾಶ್ ರಾಜ್, ಗೋಮಾಂಸ, ಹಂದಿ ಮಾಸ, ಮೀನಿನ ಜೊತೆ ಕೇರಳದ ಜನಪ್ರಿಯ ಸದ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.

'ಸಸ್ಯಾಹಾರಿ ಸದ್ಯದೊಂದಿಗೆ ಗೋಮಾಂಸ, ಹಂದಿ ಮಾಂಸ ಮತ್ತು ಮೀನುಗಳು ಹೇಗೆ ಸಹಬಾಳ್ವೆ ನಡೆಸುತ್ತವೆ ಎಂಬುದೇ ನಿಜವಾದ ಕೇರಳ ಸ್ಟೋರಿ ಎಂದಿದ್ದಾರೆ. ಅವರೆಲ್ಲರೂ ಸಾಮರಸ್ಯದಿಂದ ಬದುಕುತ್ತಾರೆ. ದಯವಿಟ್ಟು ಆನಂದಿಸಿ' ಎಂದು ಹೇಳಿದ್ದಾರೆ.

ಈ ಮೊದಲು 'ದಿ ಕೇರಳ ಸ್ಟೋರಿ 2 ಗೋಸ್ ಬಿಯಾಂಡ್' ದ್ವೇಷವನ್ನು ಹುಟ್ಟಿಸುವ ಚಿತ್ರವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದರು. ಚಿತ್ರಕ್ಕೆ ಕೇರಳದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.