ADVERTISEMENT

ಅನುಶ್ರೀಯ ಬಂಧನಕ್ಕೆ ತಡೆ ಗೋಡೆಯಾಗಿರುವ ಆ ಷುಗರ್‌ ಡ್ಯಾಡಿ ಯಾರು?

ನಿರೂಪಕಿ ಮೇಲೆ ಗಂಭೀರ ಆರೋಪ ಮಾಡಿದ ವಕೀಲ ಪ್ರಶಾಂತ್ ಸಂಬರಗಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 11:02 IST
Last Updated 2 ಅಕ್ಟೋಬರ್ 2020, 11:02 IST
ಅನುಶ್ರೀ
ಅನುಶ್ರೀ   

‘ಸಿಸಿಬಿಯಿಂದ ವಿಚಾರಣೆ ಎದುರಿಸಿರುವ ಮಾತ್ರಕ್ಕೆ ನಾನು ಅಪರಾಧಿಯಲ್ಲ’ ಎಂದು ನಟಿ ಹಾಗೂ ನಿರೂ‍ಪಕಿ ಅನುಶ್ರೀ ಇಂದು ಬೆಳಿಗ್ಗೆ ವಿಡಿಯೊ ಸಂದೇಶದಲ್ಲಿ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೆ, ‘ಆಕೆಯ ರಕ್ಷಣೆಗೆ ಷುಗರ್‌ ಡ್ಯಾಡಿಯೊಬ್ಬರು ನಿಂತಿದ್ದಾರೆ’ ಎಂದು ವಕೀಲ ಪ್ರಶಾಂತ್‌ ಸಂಬರಗಿ ಟ್ವಿಟರ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಸಂಜನಾ ಗರ್ಲಾನಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದ ಅವರು, ಈಗ ಅನುಶ್ರೀ ವಿರುದ್ಧವೂ ಆರೋಪಗಳನ್ನು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಇಲ್ಲಿಯವರೆಗೂ ಅನುಶ್ರೀಯ ಬಂಧನವಾಗದಂತೆ ಷುಗರ್‌ ಡ್ಯಾಡಿ ತಡೆದಿದ್ದಾರೆ. ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಆಕೆಯ ತಪ್ಪಿಗೆ ಶಿಕ್ಷೆಯಾಗುವುದು ನಿಶ್ಚಿತ. ಅನುಶ್ರೀಯ ಮತ್ತಷ್ಟು ರಹಸ್ಯಗಳು ಬಯಲಾಗುವುದು ಗ್ಯಾರಂಟಿ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಅನುಶ್ರೀ ‘ರಿಂಗ್‌ ಮಾಸ್ಟರ್‌’ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದು ಥಾಯ್‌ ಸಿನಿಮಾವಾದ ‘ಕೌಂಟ್‌ಡೌನ್‌’ನ ನಕಲಾಗಿದೆ. ಈ ಸಿನಿಮಾದಲ್ಲಿ ಹೊಸವರ್ಷದ ಆಚರಣೆಗೆ ಅನುಶ್ರೀ ಮತ್ತು ಆಕೆಯ ಸ್ನೇಹಿತರು ಮುಂದಾಗುತ್ತಾರೆ. ಆಗ ಡ್ರಗ್ಸ್‌ ಪೆಡ್ಲರ್‌ಗೆ ಕರೆ ಮಾಡುತ್ತಾರೆ. ಆಗ ಆತನ ನಿಜಬಣ್ಣ ಬಯಲಾಗುತ್ತದೆ. ಕಲೆ ಎಂಬುದು ಬದುಕಿನ ಅನುಕರಣೆಯೋ ಅಥವಾ ಬದುಕು ಸಿನಿಮಾದ ಅನುಕರಣೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಷುಗರ್‌ ಡ್ಯಾಡಿ ಯಾರು?

ಪ್ರಶಾಂತ್‌ ಪ್ರಸ್ತಾಪಿಸಿರುವ ಈ ಷುಗರ್‌ ಡ್ಯಾಡಿ ಯಾರು ಎಂಬುದು ಕುತೂಹಲ ಮೂಡಿಸಿದೆ. ‘ಹಣ, ದುಬಾರಿ ವಸ್ತುಗಳು ಮತ್ತು ಅಮೂಲ್ಯ ಉಡುಗೊರೆಗಳನ್ನು ನೀಡಿ ಅದಕ್ಕೆ ಪ್ರತಿಯಾಗಿ ಯುವತಿಯರೊಂದಿಗೆಲೈಂಗಿಕ ಸಂಬಂಧ ಹೊಂದಿರುವ ಹಿರಿಯ ವಯಸ್ಸಿನ ವ್ಯಕ್ತಿಗೆ ಷುಗರ್ ಡ್ಯಾಡಿ ಎನ್ನುತ್ತಾರೆ’ ಎಂದು ಅವರೇ ಟ್ವೀಟ್‌ನಲ್ಲಿ ವಿವರಣೆಯನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.