'ಫುಲೆ' ಸಿನಿಮಾದ ಪೋಸ್ಟರ್
(ಚಿತ್ರ ಕೃಪೆ–@ananthmahadevan)
ಮುಂಬೈ: ನಟ ಪ್ರತೀಕ್ ಗಾಂಧಿ ಅಭಿನಯದ 'ಫುಲೆ' ಸಿನಿಮಾ ಏಪ್ರಿಲ್ 11ರಂದು ತೆರೆ ಕಾಣಲಿದೆ.
ಹಿರಿಯ ನಟ ಅನಂತ್ ಮಹದೇವನ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಪ್ರತೀಕ್ ಅವರು, ಸಾಮಾಜಿಕ ಕಾರ್ಯಕರ್ತ ಹಾಗೂ ಸುಧಾರಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ಪತ್ರಲೇಖಾ ಅವರು ಶಿಕ್ಷಣತಜ್ಞೆ ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ. ಈ ಸಂದರ್ಭದಲ್ಲಿ ಡ್ಯಾನ್ಸಿಂಗ್ ಶಿವ ಫಿಲ್ಮ್ಸ್, ಕಿಂಗ್ಸ್‌ಮೆನ್ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿವೆ.
ಈ ಚಿತ್ರವು ಫುಲೆಯವರ ಜೀವನದ ಅನೇಕ ವಿಷಯಗಳನ್ನು ತೆರೆದಿಡುತ್ತದೆ ಎಂದು ಮಹದೇವನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.