ADVERTISEMENT

’ಸಲಾರ್‌’: ಪ್ರಭಾಸ್‌ಗೆ ಮಲಯಾಳಂ ನಟ ಪೃಥ್ವಿರಾಜ್‌ ವಿಲನ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 12:19 IST
Last Updated 9 ಮಾರ್ಚ್ 2022, 12:19 IST
ಪ್ರಭಾಸ್‌, ಪೃಥ್ವಿರಾಜ್‌
ಪ್ರಭಾಸ್‌, ಪೃಥ್ವಿರಾಜ್‌    

ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟನೆಯ ’ಸಲಾರ್‌’ ಸಿನಿಮಾದಲ್ಲಿಮಲಯಾಳಂ ನಟ ಪೃಥ್ವಿರಾಜ್‌ ಖಳ ನಟರಾಗಿ ಅಭಿನಯ ಮಾಡಲಿದ್ದಾರೆ ಎಂದು ಪ್ರಭಾಸ್‌ ಹೇಳಿದ್ದಾರೆ.

’ಸಲಾರ್‌’ ಸಿನಿಮಾವನ್ನು ಕನ್ನಡಿಗೆ ಪ್ರಶಾಂತ್‌ ನೀಲ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಸಂ ನಿರ್ಮಾಣ ಮಾಡುತ್ತಿದೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ’ಸಲಾರ್‌’ನಲ್ಲಿ ಪೃಥ್ವಿರಾಜ್‌ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಲೀಕ್‌ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಿರ್ದೇಶಕರು ಮಾಹಿತಿ ನೀಡಲಿದ್ದಾರೆ ಎಂದು ಪ್ರಭಾಸ್‌ ಹೇಳಿದ್ದಾರೆ.

ADVERTISEMENT

ಈಗಾಗಲೇ ಚಿತ್ರದ ಶೂಟಿಂಗ್‌ ಆರಂಭವಾಗಿದೆ. ಕೆಲವು ಹಂತಗಳಲ್ಲಿ ಶೃತಿ ಹಾಸನ್‌ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಪೃಥ್ವಿರಾಜ್‌ ನಟನೆ ಬಗ್ಗೆ ಚಿತ್ರತಂಡ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.

ಸದ್ಯ ಪ್ರಭಾಸ್​, ಪೂಜಾ ಹೆಗ್ಡೆ ನಟಿಸಿರುವ ‘ರಾಧೆ ಶ್ಯಾಮ್​’ ಸಿನಿಮಾ ಮಾರ್ಚ್​ 11ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.