ADVERTISEMENT

ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ: ಪಿಆರ್‌ಕೆ ಆ್ಯಪ್ ಟ್ರೇಲರ್‌ಗೆ ಮುಹೂರ್ತ ನಿಗದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2025, 6:57 IST
Last Updated 16 ಅಕ್ಟೋಬರ್ 2025, 6:57 IST
<div class="paragraphs"><p>ಅಶ್ವಿನಿ ಪುನೀತ್ ರಾಜಕುಮಾರ್</p></div>

ಅಶ್ವಿನಿ ಪುನೀತ್ ರಾಜಕುಮಾರ್

   

ಚಿತ್ರ: ಇನ್‌ಸ್ಟಾಗ್ರಾಮ್

ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ವರ್ಷಗಳೇ ಉರುಳಿವೆ. ಆದರೆ ಅವರ ನೆನಪು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಅಪ್ಪು ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರು ಸಂದೇಶ ಒಂದನ್ನು ರವಾನಿಸಿದ್ದಾರೆ.

ADVERTISEMENT

ಹೌದು, ಇನ್ನು ಮುಂದೆ ಅಪ್ಪು ಅವರನ್ನು ಪ್ರತಿದಿನ ಕಣ್ತುಂಬಿಕೊಳ್ಳುವ ಅವಕಾಶವೊಂದನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಕಲ್ಪಿಸಿಕೊಡುತ್ತಿದ್ದಾರೆ. ಇದೇ ಅಕ್ಟೋಬರ್ 29, ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ದಿನದಂದು ಪಿಆರ್‌ಕೆ ಆ್ಯಪ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಹಂಚಿಕೊಂಡ ವಿಡಿಯೊದಲ್ಲಿ ಏನಿದೆ?

‘ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಪ್ಪು ಕನಸೊಂದು ನನಸಾಗುತ್ತಿದೆ. ಹೊಸ ಬೆಳಕೊಂದು ಮತ್ತೆ ಮೂಡಲಿದೆ. ಒಂದು ಪವರ್ ಫುಲ್ ಬೆಳಕು. ಅಭಿಮಾನ, ನಗು, ನೆನಪುಗಳೆಲ್ಲಾ ಒಂದೇ ವೇದಿಕೆಯಲ್ಲಿ ಸೇರುವ ಸಮಯ’ ಎಂದು ಹೇಳಿದ್ದಾರೆ.

ಜೊತೆಗೆ ‘ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ. ನಿಮ್ಮ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಬರ್ತಿದೆ ಒಂದು ಪವರ್‌‌ಫುಲ್ ಟ್ರೇಲರ್‌ ಇದೇ ಶನಿವಾರ ಬೆಳಗ್ಗೆ 11.55ಕ್ಕೆ. ಮತ್ತೆ ಅಪ್ಪುವನ್ನು ಪಿಆರ್‌ಕೆ ಆ್ಯಪ್ (PRK App) ಮೂಲಕ ಕಣ್ತುಂಬಿಕೊಳ್ಳಲು ರೆಡಿಯಾಗಿ’ ಎಂದು ಬರೆದುಕೊಂಡಿದ್ದಾರೆ.